– ಯಾವುದೋ ಹಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ: ಮಾಜಿ ಸಂಸದ ಕಿಡಿ
ಕೊಡಗು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay Somaiah) ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಥಳೀಯ ಶಾಸಕ ಪೊನ್ನಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕುಶಾಲನಗರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಪ್ರತಾಪ್ ಸಿಂಹ (Pratap Simha), ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ ಅಷ್ಟೆ. ಯಾವುದೋ ಹಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ. ನಿನ್ನನ್ನು ಮೂರು ವರ್ಷದ ನಂತರ ಕೊಡಗಿನ ಜನ ಇಲ್ಲಿಂದ ಓಡಿಸುತ್ತಾರೆ. ನಮ‌್ಮ ಸಿಟ್ಟು ಹೆಚ್ಚು ಮಾಡಬೇಡಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಶಾಸಕ ಪೊನ್ನಣ್ಣ & ವಿನಯ್ ಸೋಮಯ್ಯ ವಾಟ್ಸಪ್ ಚಾಟ್‌ನಲ್ಲೇನಿದೆ?
ವಿನಯ್ ಸಾವಿಗೆ ಹಣದ ಕಾರಣ ಅನ್ನೋದು ಬಿಟ್ಟು ಬಿಡಿ. ನಿಮ್ಮ ಭಿಕ್ಷೆಯ ಹಣ ನಮಗೆ ಬೇಕಿಲ್ಲ. ಪದೇ ಪದೇ ಹಣದ ವಿಚಾರ ಹೇಳಿದರೆ ಸರಿ ಇರಲ್ಲ. ನಿಮಗೆ ಧೈರ್ಯ ಇದ್ದರೆ ವಿನಯ್ ಮನೆಗೆ ಹೋಗಿ ಜನ ಹೂವಿನ ಹಾರ ಹಾಕುತ್ತಾರೋ ಛೀ ಥೂ ಅಂತಾ ಉಗಿಯುತ್ತಾರಾ ನೋಡಿ. ನಿಮಗೆ ಏನೂ ಎರಡು ಕೊಂಬು ಇದ್ದವಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿನಯ್ ಸೋಮಯ್ಯ ಸಾಯುವ ಮೊದಲು ಕಳುಹಿಸಿರುವ ವಾಟ್ಸಪ್ ಮೆಸೇಜ್‌ನಲ್ಲಿ ನನ್ನ ಸಾವಿಗೆ ಏನು ಕಾರಣ, ಯಾರ‍್ಯಾರು ಒತ್ತಡ ಹಾಕಿದ್ರು, ಪೊಲೀಸರಿಂದ ಯಾವ ರೀತಿ ದೌರ್ಜನ್ಯ ಆಯ್ತು ಎಲ್ಲವೂ ಇದೆ. ಹರೀಶ್ ಪೂವಯ್ಯ, ತೆನ್ನಿರಾ, ಪೊನ್ನಣ್ಣ (Ponnanna), ಮಂಥರ್ ಗೌಡ ನಾಲ್ಕು ಜನರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಮಾತ್ರ ತೆನ್ನಿರಾ ಒಬ್ಬರನ್ನು ಇನ್ನು ಮೂವರ ಹೆಸರನ್ನು ಕೈಬಿಟ್ಟಿದ್ದಾರೆ. ಯಾಕೆ ಕೈಬಿಟ್ಟರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಕಿರುಕುಳಕ್ಕೆ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಬಯಲು
ಡೆತ್‌ನೋಟ್ ಆಧಾರದಲ್ಲಿ ನಾಲ್ಕೂ ಜನರ ವಿರುದ್ಧವೂ ಎಫ್‌ಐಆರ್ ಆಗಬೇಕು. ಅಲ್ಲಿವರೆಗೆ ಅಂತ್ಯಸಂಸ್ಕಾರ ಮಾಡುವುದು ಬೇಡ ಎಂದು ಕುಟುಂಬದವರ ಜೊತೆ ಮಾತನಾಡಿ ತೀರ್ಮಾನಿಸಲಾಗಿದೆ. ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ದಾರಿ ತಪ್ಪಿಸಿದ್ರು. ಅವರು ದೂರಿನಲ್ಲಿ ಕೊಟ್ಟೇ ಇಲ್ಲ ಅಂತ ಹೇಳಿದ್ರು. ಆದರೆ, ವಿನಯ್ ಕುಟುಂಬದವರನ್ನು ವಿಚಾರಿಸಿದಾಗ, ನಾಲ್ಕು ಜನರ ಹೆಸರನ್ನು ಉಲ್ಲೇಖಿಸಿ ನೀಡಿರುವ ದೂರಿನ ಪ್ರತಿಯನ್ನು ನಮಗೆ ತೋರಿಸಿದರು. ಇಷ್ಟಾಗಿಯು ಕೂಡ ಯಾಕೆ ಉಳಿದವರ ಹೆಸರನ್ನು ಕೈಬಿಟ್ಟರು? ನಾಲ್ಕು ಜನರ ವಿರುದ್ಧ ಎಫ್‌ಐಆರ್ ಆದ ಮೇಲೆ ನಾವು ಅಂತ್ಯಸಂಸ್ಕಾರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.