– ರಾಜ್ಯದಲ್ಲಿ ಮದರಸಾ, ಉರ್ದು ಶಾಲೆ ಬಂದ್ ಮಾಡಿ
– ಸಿಎಂ ತಾಲಿಬಾನ್, ಡಿಸಿಎಂ ಗೂಂಡಾ ಸರ್ಕಾರ ನಡೆಸ್ತಿದ್ದಾರೆ: ಮಾಜಿ ಸಂಸದ ಕಿಡಿ
ಮೈಸೂರು: ರಾಜ್ಯ ಬಜೆಟ್‌ಗೆ ಸಾಬ್ರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ. ಮಸೀದಿ, ಚರ್ಚ್ನಿಂದ ಸರ್ಕಾರಕ್ಕೆ ಐದು ರೂಪಾಯಿ ತೆರಿಗೆ ಬರ್ತಿದೆಯಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕ್ಯಾತಮಾರನಹಳ್ಳಿ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸಿದೆ. ಅನಧಿಕೃತ ಮಸೀದಿಯನ್ನು ಮತ್ತೆ ಆರಂಭಿಸಲು ಪ್ರಯತ್ನ ಶುರುವಾಗಿದೆ. ತಾಲಿಬಾನಿ ಸರ್ಕಾರ ಇರುವ ಕಾರಣ ಇಂತಹ ಪ್ರಯತ್ನವನ್ನು ಮುಸ್ಲಿಂ ಮುಖಂಡರು ಆರಂಭಿಸಿದ್ದಾರೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಮಸೀದಿ ತೆರೆಯಲು ಬಿಡಲ್ಲ. ಸಿಎಂ ಅವರೇ ಮಸೀದಿ ಓಪನ್ ಮಾಡಿಸಿ ನೋಡಿ, ಆಮೇಲೆ ಮುಂದಿನದ್ದು ಹೇಳ್ತಿನಿ ಎಂದು ಸವಾಲ್ ಹಾಕಿದ್ದಾರೆ.
ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ಧಪಡಿಸಿ. ಹಿಂದೂಗಳು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಮುಸ್ಲಿಮರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಕ್ರಿಶ್ಚಿಯನ್ನರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಅದರ ವರದಿ ತಯಾರಿಸಿ ಬಿಡುಗಡೆ ಮಾಡಿ. ರಾಜ್ಯ ಬಜೆಟ್‌ಗೆ ಸಾಬ್ರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ. ಮಸೀದಿಯಿಂದ, ಚರ್ಚ್ನಿಂದ ಸರ್ಕಾರಕ್ಕೆ ಐದು ರೂಪಾಯಿ ತೆರಿಗೆ ಬರ್ತಿದ್ದಿಯಾ? ಇದು ಹಲಾಲ್ ಬಜೆಟ್ ಅನ್ನೋದರಲ್ಲಿ ತಪ್ಪು ಇಲ್ಲ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ, ಮಡಿವಾಳರ ಹೀಗೆ ನಾನಾ ಜಾತಿಯ ಅಭಿವೃದ್ಧಿ ನಿಗಮಕ್ಕೆ ಎಷ್ಟು ಹಣ ಕೊಟ್ಟಿದ್ದೀರಾ? ಇವತ್ತು ಇಲ್ಲಿನ ಕೆಲ ಮುಸ್ಲಿಮರಿಗೆ ಪಾಕಿಸ್ತಾನ ನಿಷ್ಠೆ ಇದೆ. ರಾಜ್ಯದಲ್ಲಿ ಮದರಾಸ, ಉರ್ದು ಶಾಲೆ ಬಂದ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಡಿಸಿಎಂ ನಟ್ಟು-ಬೋಲ್ಟು ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಾ ಸರ್ಕಾರ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಕರ್ನಾಟಕ ಏನೂ ನಿಮ್ಮ ರಿಯಲ್ ಎಸ್ಟೇಟ್ ಆಫೀಸಾ ಪ್ರಶ್ನಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ. ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು, ಸುದೀಪ್, ಶಿವಣ್ಣ, ಯಶ್ ಏನೂ ನಿಮ್ಮ ಪಾರ್ಟಿ ಕಾರ್ಡ್ ಓಲ್ಡರ್‌ಗಳಾ? ಈಗ ನೀವು ಮೇಕೆದಾಟು ಯಾತ್ರೆ ಮಾಡಿ ನಾನೂ ಹೋರಾಟಕ್ಕೆ ಬರ್ತೀನಿ. ನಮ್ಮ ಕಾರ್ಯಕರ್ತರು ಬರ್ತೀವಿ. ಕಾಂಗ್ರೆಸ್ ಬಾವುಟ ಇಲ್ಲದೆ ಯಾತ್ರೆ ಮಾಡಿ ನಾವೆಲ್ಲರೂ ಬರ್ತೀವಿ. ಡಿಕೆಶಿ ಅವರೇ, ನಟ್ಟು-ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ. ಅದೇ ಭಾಷೆ ನೀವು ಪ್ರಯೋಗ ಮಾಡಿದ್ದೀರಿ. ಡಿಕೆಶಿ ಅವರೇ, ಹುಲಿ ಏರಿದ್ದೀರಿ. ಜನ ಮರ್ಯಾದೆ ಕೊಡುತ್ತಿರುವುದು ಹುಲಿಗೆ ಹೊರತು ನಿಮಗಲ್ಲ. ದರ್ಪ ಬಿಡಿ. ಹುಲಿ ಇಳಿದ ಮೇಲೆ ಅದೇ ಹುಲಿಯೆ ನಿಮ್ಮನ್ನು ತಿಂದು ಬಿಡುತ್ತದೆ ಎಚ್ಚರ ಇರಲಿ. ಕನ್ನಡ ಸಿನಿಮಾ ನಟರ ಬಗ್ಗೆ ಮಾತಾಡಬೇಡಿ. ನಟರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಯಶ್, ಶಿವಣ್ಣ, ಡಾಲಿ ಎಲ್ಲರೂ ಬೇರೆ ಕಡೆ ಹೋಗಿಯೂ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ. ಶಾಶ್ವತವಾಗಿ ನೀವೆನೂ ಅಧಿಕಾರದಲ್ಲಿ ಇರ್ತಿರಾ ಎಂದು ಟಾಂಗ್ ಕೊಟ್ಟಿದ್ದಾರೆ.