Connect with us

Districts

ಯಾರು ಇದ್ರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯ ಪರ: ರಾಜಣ್ಣ

Published

on

ತುಮಕೂರು: ನಾನು ಮಾಜಿ ಸಿಎಂ ಸಿದ್ದರಾಮಯ್ಯರ ಪರವಾಗಿರುತ್ತೇನೆ. ಅವರು ಪವರ್ ಫುಲ್ ಆಗಿದ್ದು, ಯಾರು ಇದ್ದರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯರ ಪರವಾಗಿರುತ್ತೆನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಜಿ ಸಿಎಂ ಪರ ಬ್ಯಾಂಟಿಂಗ್ ಮಾಡಿದ್ದಾರೆ.

ಶಿರಾದಲ್ಲಿ ಪರಿಶಿಷ್ಟ ಪಂಗಡಗಳ 7.5% ಮೀಸಲಾತಿ ಒತ್ತಾಯಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜಣ್ಣ, 24 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶವನ್ನು ನಾವು ಪ್ರತಿಭಟನೆ ಎಂದು ಪರಿಗಣಿಸುವುದಿಲ್ಲ. ಅದೊಂದು ಜನಾಂದೋಲನವಾಗಿದೆ. ಜನರ ಬೇಡಿಕೆಯನ್ನು ಈಡೇರಿಸಲು ಅಂದಿನ ದಿನ ಸಮಾವೇಶ ನಡೆಸುತ್ತೇವೆ ಎಂದರು.

ನಾನು ಸಿದ್ದರಾಮಯ್ಯರ ಪರ, ಅವರು ಪವರ್ ಫುಲ್ ಆಗಿದ್ದಾರೆ. ಯಾರು ಇದ್ದರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯರ ಪರವಾಗಿರುತ್ತೇನೆ ಎಂದು ಸಿದ್ದರಾಮಯ್ಯ ಪರ ಕೆ.ಎನ್.ರಾಜಣ್ಣ ಬ್ಯಾಂಟಿಂಗ್ ಮಾಡಿದ್ದಾರೆ. ಕುಮಾರಸ್ವಾಮಿ ಇರಬಹುದು ಇನ್ನೊಬ್ಬರು ಬರಬಹುದು, ಹೋಗಬಹುದು. ಆದರೆ ಸರ್ಕಾರ ಇದ್ದೆ ಇರುತ್ತದೆ. ಅದೊಂದು ನಿರಂತರವಾದ ವ್ಯವಸ್ಥೆಯಾಗಿದೆ. ಯಾರು ಅಧಿಕಾರದಲ್ಲಿರುತ್ತಾರೋ ಅವರು ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸುತ್ತಾರೆ ಎಂದು ರಾಜಣ್ಣ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಜಣ್ಣ ಹಲವು ಬಾರಿ ಸರ್ಕಾರ ಬೀಳಲಿದೆ ಎಂದು ಗಡುವು ಕೊಟ್ಟಿದ್ದರು. ಆದರೆ ಡಿಸಿಎಂ ಜಿ.ಪರಮೇಶ್ವರ್ ಹಾಗೂ ರಾಜಣ್ಣರ ನಡುವಿನ ಮುಸುಕಿನ ಗುದ್ದಾಟದ ಬಳಿಕ ಕೆ.ಎನ್.ರಾಜಣ್ಣ ಸಾಪ್ಟ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಯಾರಿಂದಲೂ ಬೀಳಿಸುವುದಕ್ಕೆ ಆಗಲ್ಲ, ಉಳಿಸುವುದಕ್ಕೂ ಆಗಲ್ಲ. ಇರುವುದಾದರೆ ಇರುತ್ತದೆ, ಬೀಳೋದಾದರೆ ಬೀಳತ್ತೆ ಎಂದು ರಾಜಣ್ಣ ಹೇಳಿದ್ದಾರೆ.

 

Click to comment

Leave a Reply

Your email address will not be published. Required fields are marked *