ಗುಂಡಿಕ್ಕಿ ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಮಗನ ಬರ್ಬರ ಹತ್ಯೆ

Public TV
1 Min Read
BLG MLA SON

ಬೆಳಗಾವಿ: ಮಾಜಿ ಶಾಸಕ ಪುತ್ರನನ್ನು ಗುಂಡು ಹೊಡೆದು ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಂದಾನಗರಿಯ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ್ ನಂದಿಹಳ್ಳಿ ಮೃತ ದುರ್ದೈವಿ. ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಅರುಣ್ ನಂದಿಹಳ್ಳಿ ತನ್ನ ಪತ್ನಿಯನ್ನು ಧಾಮನೆ ಗ್ರಾಮಕ್ಕೆ ಬಿಟ್ಟು ಕಾರಿನಲ್ಲಿ ತಡರಾತ್ರಿ ಮನೆಗೆ ಹೊರಟಿದ್ದರು.

ಈ ವೇಳೆ ಐದಾರು ಜನ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಅರುಣ್ ಅವರ ಎದೆಗೆ ಗುಂಡಿಕ್ಕಿ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಥಳೀಯರು ಅರುಣ್ ನಂದಿಹಳ್ಳಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸ್ಥಳದಲ್ಲೇ ಅರುಣ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಣಕಾಸಿನ ವ್ಯವಹಾರವೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.

ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *