ಬೆಂಗಳೂರು: ಕಾಂಗ್ರೆಸ್ ಪಕ್ಷದ ತುಮಕೂರಿನ ಮಾಜಿ ಶಾಸಕ ನಿಂಗಪ್ಪ (H Ningappa) ಅವರಿಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪಕ್ಷದ ಬಾವುಟ ನೀಡಿ ನಿಂಗಪ್ಪ ಅವರಿಗೆ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಿಂಗಪ್ಪ ಅವರು ನಮ್ಮ ಹಿರಿಯ ನಾಯಕರು. ಈ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದರು. ಅವರ ನಿಷ್ಠೆಗೆ ನಮ್ಮಿಂದಲ್ಲೆ ಸ್ವಲ್ಪ ಸಮಸ್ಯೆ ಆಗಿತ್ತು. ಅವರು ಮರಳಿ ಮನೆಗೆ ವಾಪಸ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ
Advertisement
Advertisement
ತುಮಕೂರಿನಲ್ಲಿ (Tumkur) ಪಕ್ಷ ಕಟ್ಟಿದವರು ನಿಂಗಪ್ಪ ಅವರು 2004ರಲ್ಲಿ ಶಾಸಕರಾಗಿ ಕುಣಿಗಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರು. ಆ ಭಾಗದ ರೈತರ ಬದುಕಿಗೆ ಹಸಿರಿನ ಬದುಕು ಕೊಟ್ಟವರು. 2008ರ ನಂತರ ನಮ್ಮಲ್ಲಿ ಸ್ವಲ್ಪ ಗೊಂದಲದಿಂದ ಅವರಿಗೆ ನೋವಾಗಿತ್ತು. ಅವರು ಬೇರೆ ಪಕ್ಷದಲ್ಲಿ ಇದ್ದರೂ ಮನಸು ಇಲ್ಲೇ ಇತ್ತು. 2018 ರಲ್ಲಿ ಚುನಾವಣೆ ವೇಳೆಯೂ ಅವರ ಮನೆಗೆ ಹೋಗಿದ್ದೆ. ಅವರು ಯಾವತ್ತಿಗೂ ಷರತ್ತುಗಳನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.
Advertisement
Advertisement
ಮಾಜಿ ಶಾಸಕ ಗೌರಿಶಂಕರ್ 2018 ರಲ್ಲಿ ಗೆಲ್ಲೋಕೆ ನಿಂಗಪ್ಪ ಸಹಾಯ ಮಾಡಿದ್ದು ಕಾರಣವಾಯ್ತು. ಚುನಾವಣೆ ಆದ ಮೇಲೆ ಗೌರಿಶಂಕರ್‌ಗೆ ನಿಂಗಪ್ಪ ಅವರನ್ನ ಚನ್ನಾಗಿ ನೋಡಿಕೊ, ವಿಶ್ವಾಸದಲ್ಲಿ ನೋಡಿಕೊ ಅಂತ ಹೇಳಿದ್ದೆ. ಆದರೆ ಮಾಡಿದ ಸಹಾಯವನ್ನೇ ನೆನಪು ಮಾಡಿಕೊಳ್ಳದ ಮನಸ್ಥಿತಿ ಗೌರಿಶಂಕರ್ ಅವರದ್ದು. 2023ರ ಚುನಾವಣೆಯಲ್ಲಿ ಗೌರಿಶಂಕರ್‌ಗೆ ಸರಿ ಮಾಡಿಕೋ ಅಂದೆ. ಆದರೆ ನಿಂಗಪ್ಪ ಬೇಡ ಅಂದ್ರು ಸೋತ್ರು ಅಂತಾ ಗೌರಿಶಂಕರ್ ವಿರುದ್ಧ ಕಿಡಿಕಾರಿದರು.
ಎಂಎಲ್‌ಸಿ ಸ್ಥಾನಕ್ಕೆ ನಿಂಗಪ್ಪ ಅವರನ್ನ ನಿಲ್ಲಿಸಿ ಅಂತ ಹೇಳಿದ್ದೆ. ಅದೂ ಸಾಧ್ಯವಾಗಲಿ. ಆದಾಗ್ಯೂ ಯಾವುದೇ ಷರತ್ತು ವಿಧಿಸದೇ ನಿಂಗಪ್ಪ ಅವರು ಪ್ರೀತಿ ವಿಶ್ವಾಸ ಬೇಕು ಅಂತ ಕೇಳಿದ್ದಾರೆ. ನಮ್ಮ ಪಕ್ಷ ಅವರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತದೆ. ಶೀಘ್ರದಲ್ಲೇ ತುಮಕೂರಿನಲ್ಲಿ ಸಮಾವೇಶವನ್ನೂ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು – ಪಕ್ಷದ ಅಸಮಧಾನಿತರಿಗೆ ಅಮಿತ್ ಶಾ ವಾರ್ನಿಂಗ್