DistrictsKarnatakaKarnataka ElectionLatestMandya

ವೋಟ್ ಹಾಕಿ ಅಂತ ಬಿಕ್ಕಳಿಸಿ ಅತ್ತ ಕೈ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ -ವಿಡಿಯೋ

ಮಂಡ್ಯ: ಕೆಟ್ಟ ರಾಜಕಾರಣವನ್ನು ಹೋಗಲಾಡಿಸಲು ನನಗೆ ಮತ ನೀಡಿ ಗೆಲ್ಲಿಸಿ ಎಂದು ಕಾಂಗ್ರೆಸ್ ಕೆ.ಆರ್. ಪೇಟೆ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಕಣ್ಣೀರಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತದಾರರೆದುರು ಬಿಕ್ಕಳಿಸಿ ಅತ್ತಿದ್ದಾರೆ. ಕೆ.ಬಿ.ಚಂದ್ರಶೇಖರ್ ಹೆಮ್ಮನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಪ್ರಚಾರ ಭಾಷಣದಲ್ಲಿ ಮಾತನಾಡುತ್ತ, ಈ ತಾಲೂಕಿನಲ್ಲಿ ಕೆಟ್ಟ ರಾಜಕಾರಣ ಹೋಗಲಾಡಿಸಬೇಕಾದರೆ, ನಾನು ನಿಮ್ಮೂರಿನ ಮಗನಾದ ನನಗೆ ಶಕ್ತಿಕೊಡಿ. ನಿಮ್ಮ ಋಣ ತೀರಿಸ್ತೀನಿ. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಬಿಕ್ಕಳಿಸಿ ಅತ್ತಿದ್ದಾರೆ.

ಇದು ನಾನು ಹುಟ್ಟಿ ಬೆಳೆದಂತ ಗ್ರಾಮ ಇದು. ನನಗೆ ನೀವು ಎಲ್ಲರೂ ಒಟ್ಟಾಗಿ ಸೇರಿ ಇಡೀ ಗ್ರಾಮ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಅಳುವನ್ನು ನೋಡಿ ಏನು ಹೇಳಬೇಕೆಂದು ತಿಳಿಯದ ಗ್ರಾಮಸ್ಥರು ಅಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.

https://www.youtube.com/watch?v=nMommiJVZQk&feature=youtu.be

Leave a Reply

Your email address will not be published.

Back to top button