ಚಿತ್ರದುರ್ಗ: ಬಿಜೆಪಿ (BJP) ನಾಯಕರು ಹಾಗೂ ಸಂಘಪರಿವಾರದ ವಿರುದ್ಧ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸವಾಲು ಹಾಕಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಈ ಹಿಂದೆ ನಾಗ್ಪುರದ ಹೆಡ್ಗೆವಾರ್ ಸ್ಮಾರಕದೊಳಗೆ ದಲಿತರ ಪ್ರವೇಶಕ್ಕೆ ನಿಷೇಧವಿರುವ ಬಗ್ಗೆ ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಗೆ ಕಳುಹಿಸಿದ್ದ ಆಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದ ಗೂಳಿಹಟ್ಟಿ ಶೇಖರ್ ವಿರುದ್ಧ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದ ಮುಖಂಡರು ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ
Advertisement
Advertisement
ಗೂಳಿಹಟ್ಟಿ ಶೇಖರ್ ಆರೋಪ ಅಲ್ಲೆಗೆಳೆದಿದ್ದರು. ಹೀಗಾಗಿ ಮತ್ತಷ್ಟು ಕೆಂಡಂಮಡಲವಾಗಿರುವ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೆ ಬಿಜೆಪಿ ವಿರುದ್ಧ ಗುಡುಗಿರುವ ಆಡಿಯೋ ವೈರಲ್ ಆಗಿದೆ. ‘ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವೀಡಿಯೋ ರಿಲೀಸ್ ಮಾಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ನನ್ನ ಮಾತು ಸುಳ್ಳಾಗಿದ್ರೆ, ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
ನಿಮ್ಮಲ್ಲಿ ಸಿಸಿಟಿವಿ ಫೂಟೇಜ್ ಇರುತ್ತದಲ್ಲ ರಿಲೀಸ್ ಮಾಡಿ. ನಾನು ಹೇಳಿರುವ ಸಂಪ್ರದಾಯ ಸುಳ್ಳಾದ್ರೆ, ನಿಮ್ಮ ಮನೆ ಗೇಟ್‌ಕೀಪರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಅಲ್ದೇ ಕೆಲ ತಿಂಗಳ ಮುನ್ನ ನಾನು ಈ ವಿಷಯ ಹೇಳಿದ್ದರೆ, ಇನ್ನಷ್ಟು ಸೀಟ್ ಕಳೆದುಕೊಳ್ಳುತ್ತಿದ್ರಿ ಎಂದು ಸಂಘಪರಿವಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ
Advertisement
ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಹೇಳಿಕೆಗೆ ಕೆಂಡಕಾರಿರುವ ಅವರು, ನಾನು ರಾತ್ರಿಯೆಲ್ಲಾ ಕುಡಿಯುತ್ತೇನೆ ರಾಜೀವ್ ಅಣ್ಣ. ನಮ್ಮಂಥ ಕುಡುಕರಿಂದ ನೀನು ಮಾಜಿ ಶಾಸಕರ ಪೆನ್ಷನ್ ತೆಗೆದುಕೊಳ್ತೀಯಣ್ಣ. ಸರ್ಕಾರ ಪ್ರಿಂಟ್ ಹಾಕಲ್ಲ, ಎಣ್ಣೆಯ ದುಡ್ಡೇ ಸರ್ಕಾರಕ್ಕೆ ಆದಾಯ ಎಂದು ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ನಮ್ಮ ಆರ್.ಅಶೋಕಣ್ಣ, ಸುರೇಶ್ ಕುಮಾರ್ ಸರ್ ಬಹಳ ಹಿರಿಯರು. ನಿನ್ನೆ ಮೊನ್ನೆ ನನ್ನ ಹೇಳಿಕೆ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಜನರಲ್ ಕ್ಷೇತ್ರದಲ್ಲಿ ಗೆದ್ದು 38 ವರ್ಷಕ್ಕೆ ಮಂತ್ರಿ ಆಗಿದ್ದೆ. ಪಿ.ರಾಜೀವಣ್ಣ ನಿನ್ನಂತೆ ರಿಸರ್ವ್ ಕ್ಷೇತ್ರದಲ್ಲಿ ಗೆದ್ದಿಲ್ಲ ನಾನು. 35 ವರ್ಷಕ್ಕೆ ನಾನು ಸಾಯಬೇಕಿತ್ತು. ಕೊಲೆ ಆಗಬೇಕಿತ್ತು ಇಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೂ ನಾನು ಈಗ 55 ವರ್ಷ ಬದುಕಿದ್ದೇ ಗ್ರೇಟ್ ಎಂದು ಟೀಕಿಸಿರುವ ಗೂಳಿಹಟ್ಟಿ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.