ಅಗರ್ತಲಾ: ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ (Dies Of Cancer) ಬಳಲುತ್ತಿದ್ದ ತ್ರಿಪುರಾ ಮೂಲದ ಮಾಜಿ ಮಿಸ್ ಇಂಡಿಯಾ ತಾರೆ ರಿಂಕಿ ಚಕ್ಮಾ (Rinky Chakma) (28) ನಿಧನರಾಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕವು ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದ ಚಕ್ಮಾ ನಿಧನರಾಗಿದ್ದಾರೆ. ಫೆಮಿನಾ ಮಿಸ್ ಇಂಡಿಯಾ (Femina Miss India) ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ಚಕ್ಮಾ ಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ಬರಿಸುವ ಶಕ್ತಿ ದೇವರು ಕೊಡಲಿ ಎಂದು ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ದೀದಿ ಸರ್ಕಾರ ಉರುಳಿಸೋ ವರೆಗೂ ತಲೆ ಕೂದಲು ಬೆಳೆಸಲ್ಲ: ಶಪಥ ಮಾಡಿದ್ದ ‘ಕೈ’ ನಾಯಕ ಬಿಜೆಪಿ ಸೇರ್ಪಡೆ
Advertisement
View this post on Instagram
Advertisement
ಶಸ್ತ್ರಚಿಕಿತ್ಸೆ ಬಳಿಕ ಚಿಕಿತ್ಸಾ ವಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ ಚಕ್ಮಾ, ಶೀಘ್ರ ಗುಣಮುಖವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತೇನೆ ಅನ್ನೋ ಭರವಸೆಯಲ್ಲಿದ್ದರು. ಆದ್ರೆ ಆಕೆ ಗುಣಮುಖಳಾಗುವುದಿಲ್ಲ ಎಂದು ತಿಳಿದ ನಂತರ ತನಗೆ ಸ್ತನ ಕ್ಯಾನ್ಸರ್ (ಫೈಲೋಡ್ಸ್ ಟ್ಯೂಮರ್) ಇರೋದನ್ನ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರ ಬಿಡುಗಡೆ – ಆಯ್ಕೆಗೆ ಮೋದಿ, ಅಮಿತ್ ಶಾ ತಂತ್ರವೇನು?
Advertisement
Advertisement
ಚಕ್ಮಾ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತು, ತಲೆ ಭಾಗದಲ್ಲಿ ಗಡ್ಡೆ ಬೆಳೆಯಿತು (ಮೆದುಳಿನ ಗಡ್ಡೆ). ಇದರಿಂದ ಕಿಮೋಥೆರಪಿಗೆ ಒಳಗಾಗಿದ್ದರು. ಈ ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯೂ ಉಂಟಾಗಿ ಇದ್ದ ಹಣವೆಲ್ಲ ಖಾಲಿಯಾಯ್ತು. ನಂತರ ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ದೇಣಿಗೆ ಸಂಗ್ರಹಿಸಲು ಶುರು ಮಾಡಿದರು. ಅಷ್ಟರಲ್ಲೇ ಚಕ್ಮಾ ನಿಧನರಾದರು. ಇದನ್ನೂ ಓದಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದ ರ‍್ಯಾಟ್ ಹೋಲ್ ಮೈನಿಂಗ್ ಹೀರೋ ಮನೆ ನೆಲಸಮಗೊಳಿಸಿದ ಅಧಿಕಾರಿಗಳು
ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಗಳಿಸಿದ್ದರು. ಜೊತೆಗೆ ಮಾನುಷಿ ಚಿಲ್ಲರ್ ಪ್ರಶಸ್ತಿಯನ್ನು ಗೆದ್ದಿದ್ದರು.
ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು..?
* ಮಹಿಳೆಯರಲ್ಲಿ ಹೆಚ್ಚಾದ ಮದ್ಯಪಾನ ಹಾಗೂ ಧೂಮಪಾನ
* ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್
* ಅತಿ ಬೇಗನೇ ಋತುಸ್ರಾವ
* ತಡವಾದ ಋತುಬಂಧ
* ಸಂತಾನೋತ್ಪತ್ತಿ ಅಂಶಗಳು
* ಗರ್ಭನಿರೋಧಕ ಬಳಕೆ
* ಹಾರ್ಮೋನು ಬದಲಾವಣೆಯ ಚಿಕಿತ್ಸೆ
* ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಈ ಎಲ್ಲವುಗಳು ಸ್ತನ ಕ್ಯಾನ್ಸರ್‍ಗೆ ಕಾರಣವಾಗಿರುತ್ತದೆ.
ಆರಂಭಿಕ ಲಕ್ಷಣಗಳು:
* ಒಂದು ಅಥವಾ ಎರಡೂ ಸ್ತನಗಳಲ್ಲಿ ಊತ ಅಥವಾ ಕೆಂಪಾಗುವಿಕೆಯಂತಹ ಸ್ಪಷ್ಟ ವ್ಯತ್ಯಾಸಗಳು
* ಸ್ತನಗಳ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
* ಒಂದು ಅಥವಾ ಎರಡೂ ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ
* ಎದೆ ಹಾಲು ಹೊರತುಪಡಿಸಿ ನಿಪ್ಪಲ್ ಡಿಸ್ಚಾರ್ಜ್
* ಸ್ತನಗಳಲ್ಲಿ / ಸುತ್ತಲೂ ಅಸಾಮಾನ್ಯ ನೋವು
* ಸ್ತನದ ಮೇಲೆ ಅಥವಾ ಒಳಗೆ ಗಂಟುಗಳು ಅಥವಾ ಊತಗಳು