ಕೋಲಾರ : ಹೊಸ ವರ್ಷದ ಹಿನ್ನಲೆಯಲ್ಲಿ ಕೋಲಾರದಲ್ಲಿಂದು ಸಂಸದರಿಗೆ ಮಾಜಿ ಸಚಿವ ವರ್ತೂರ್ ಪ್ರಕಾಶ್ (Varturu Prakash) ಕಿಸ್ ಕೊಟ್ಟ ಸನ್ನಿವೇಶ ನಡೆದಿದೆ.
ಕೋಲಾರ (Kolar) ನಗರ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ಹಾಗೂ ವಿವಿಧೆಡೆ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಘಟನೆ ನಡೆದಿದೆ.
ಬಿಜೆಪಿಯಲ್ಲಿ (BJP) ಗೊಂದಲವಿದೆಯಾ ಎಂಬ ಪ್ರಶ್ನೆಗೆ ಕಿಸ್ ಕೊಡುವ ಮೂಲಕ ಉತ್ತರ ನೀಡಿದ ಅವರು, ನಮ್ಮ ಪಕ್ಷದಲ್ಲಿ ಗೊಂದಲವಿಲ್ಲ ಎಂದು ಸಂಸದರಿಗೆ ಕಿಸ್ ಕೊಟ್ಟ ಹಾಸ್ಯ ಸನ್ನಿವೇಶ ನಡೆಯಿತು. ಈ ವೇಳೆ ಮಾತನಾಡಿದ ಅವರು ನಾವು ಹೊಸ ವರ್ಷಕ್ಕೆ ಪ್ರಮಾಣ ಮಾಡಿದ್ದೇವೆ, ನಮ್ಮ ನಾಯಕರು ಸಂಸದರು ಮುನಿಸ್ವಾಮಣ್ಣ ಅವರು, ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಕೊನೆಯವರೆಗೂ ಚುನಾವಣೆ ಮಾಡುತ್ತೇವೆ. ಸಚಿವರು ಬಂದಾಗ ನಿಮ್ಮ ವರಸೆ ಬದಲಾಗುತ್ತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ ಮುಂದೆ ನಾವು ಜೊತೆಯಾಗಿಯೇ ಇರುತ್ತೇವೆ ಎಂದು ಮುನಿಸ್ವಾಮಿಗೆ (Muniswamy) ಕಿಸ್ ಮಾಡುವ ಮೂಲಕ ವರ್ತೂರು ಪ್ರಕಾಶ್ ಹೊಸ ವರ್ಷದ ಕಿಸ್ ಮಾಡಿದರು. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್ ಆಗಿದೆ; ಕಾಂಗ್ರೆಸ್ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ
ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜೊತೆಯಲ್ಲಿ ಇರುತ್ತಾರೆ. ಆದರೆ ಬೆಳಗ್ಗೆ, ಸಾಯಂಕಾಲ ಕೋಲಾರದಲ್ಲಿ ರಾಜಕೀಯ ಮಾಡುವುದು ನಾವು ಎಂದು ಸಂಸದರಿಗೆ ವರ್ತೂರ್ ಪ್ರಕಾಶ್ ಕಿಸ್ ಕೊಟ್ಟರು. ಇದೇ ವೇಳೆ ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಸ್ಫೋಟ – 10 ಮಂದಿ ಸಾವು