ಮೈಸೂರು: ನಂಜನಗೂಡು ಉಪ ಚುನಾವಣೆ ಬಗ್ಗೆ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ 130 ಪುಟದ ಪುಸ್ತಕ ಬರೆದಿದ್ದಾರೆ. ಸ್ವಾಭಿಮಾನ ರಾಜಕಾರಣದ ಹಿನ್ನೆಲೆ – ನಂಜನಗೂಡು ವಿಧಾನಸಭಾ ಉಪ ಚುನಾವಣೆ ವಿಶ್ಲೇಷಣೆ ಎಂದು ಪುಸ್ತಕಕ್ಕೆ ಶೀರ್ಷಿಕೆಯನ್ನು ಇಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಅನುಭವಗಳನ್ನು ಪುಸ್ತಕ ಮೂಲಕ ಹೇಳುತ್ತೇನೆ. 2017ರಲ್ಲಿ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಶ್ರೀನಿವಾಸ್ ಪ್ರಸಾದ್ ಸೋಲನ್ನು ಅನುಭವಿಸಿದ್ದರು. ಇಂದು ಬಿಡುಗಡೆ ಮಾಡಿರುವ ಪುಸ್ತಕದಲ್ಲಿ ನಂಜನಗೂಡು ಉಪ ಚುನಾವಣೆ ಹೇಗೆ ನಡೆಯಿತು ಮತ್ತು ತಮ್ಮ ಸೋಲು ಹೇಗಾಯಿತು ಎಂಬ ರಹಸ್ಯಗಳನ್ನು ಪುಸ್ತದಲ್ಲಿ ದಾಖಲಿಸಿದ್ದಾರೆ.
Advertisement
Advertisement
ಹಾಗಾದ್ರೆ ಪುಸ್ತಕದಲ್ಲಿ ಇರೋದೇನು?:
1. ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಮುಖ ಕಾರಣ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿದ್ದರೆ ನನ್ನ ಗೆಲುವು ನಿಶ್ವಿತವಾಗಿತ್ತು. ನನಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದ ದೇವೇಗೌಡರು ನನ್ನ ಸೋಲಿಗೆ ಕಾರಣವಾಗಿದ್ದು ಎಷ್ಟು ಸರಿ ? ಎಂದು ಪ್ರಶ್ನಿಸಿರುವ ಪ್ರಸಾದ್, ದೇವೇಗೌಡರ ಇಂತಹ ನಡೆಯ ಬಗ್ಗೆ ಜನರೇ ತೀರ್ಮಾನ ಮಾಡಲಿ. ರಾಷ್ಟ್ರ ರಾಜಕಾರಣದಲ್ಲಿ ನುರಿತ ದೇವೇಗೌಡರು ಇದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನೆ ಹಾಕಿದ್ದಾರೆ.
Advertisement
2. ಸಿಎಂ ಸಿದ್ದರಾಮಯ್ಯ ಅವರಿಗೆ ಉಪ ಚುನಾವಣೆಯಲ್ಲಿ ಅಹಿಂದ ಮತದಾರರು ಮಾರಾಟದ ಸರಕಾದರು. ಉಪಚುನಾವಣೆಯಲ್ಲಿ ಅಹಿಂದ ಮಾತದಾರರನ್ನು ಮಾರಾಟದ ಸರಕಿನಂತೆ ಸಿಎಂ ಬಳಸಿಕೊಂಡರು. ನಂಜನಗೂಡು ಉಪಚುನಾವಣೆ ನಂತರ ಸಿಎಂ ಬ್ರಹ್ಮ ರಾಕ್ಷಸರಾದರು. ಉಪಚುನಾವಣೆ ಫಲಿತಾಂಶ ಬರುವವರೆಗೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಭೇಟಿಗೆ ಅವಕಾಶ ಕೊಡುತ್ತಿರಲಿಲ್ಲ. ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಗೆ ಗುಟುಕು ನೀರು ಸಿಕ್ಕು ಸಿದ್ದರಾಮಯ್ಯ ಅವರಿಗೆ ಎಂಟ್ರಿ ಕೊಟ್ಟಿದ್ದಾರೆ.
Advertisement
3. ಸಚಿವ ಡಾ.ಎಚ್.ಸಿ.ಮಹದೇವಪ್ಪ 1994ರಲ್ಲಿ ಅತೀವ ಕಷ್ಟದಲ್ಲಿದ್ದರು. ಆಗ ನಾನು ಮಾಡಿದ ಸಹಾಯ ನಿಮಗೆ ನೆನಪಿಲ್ಲವೇ? ನನ್ನ ವಿರುದ್ಧ ದಲಿತ ಸಂಘಟನೆಗಳನ್ನು ಎತ್ತಿಕಟ್ಟಿ ಅಪಪ್ರಚಾರ ಮಾಡಿದ್ದು ಮಹದೇವಪ್ಪ.
4. ಸಂಸದ ಆರ್.ಧ್ರುವನಾರಾಯಣ್ ಅವರಿಗೆ ಮೊದಲು ಎಂಪಿ ಟಿಕೆಟ್ ಕೊಡಿಸಿದ್ದು ನಾನು. ಇದು ಮರೆತು ಹೋಯಿತೆ?
5. ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮೊದಲ ಎಂ.ಎಲ್.ಎ. ಟಿಕೆಟ್ ಕೊಡಿಸಿದ್ದು ನಾನು. ಇದು ನೆನಪಿಗೆ ಬರಲಿಲ್ಲವಾ ಡಿಕೆಶಿವಕುಮಾರ್?
ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ದಿಗ್ವಿಜಯ ಸಿಂಗ್ ಎಲ್ಲರನ್ನು ಹೀಗೆ ಶ್ರೀನಿವಾಸಪ್ರಸಾದ್ ವ್ಯಕ್ತಿಗತವಾಗಿ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ `ನಾಡ ನಡುವಿನಿಂದ ಬಂದ ನೋವಿನ ಕೂಗು’ ಎಂಬ ಹಾಡು ಹೇಳುವಾಗ ಶ್ರೀನಿವಾಸಪ್ರಸಾದ್ ಭಾವುಕರಾಗಿ ಕಣ್ಣೀರು ಹಾಕಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂತೋಷ್ ಹೆಗ್ಡೆ, ನಾನು 5 ವರ್ಷ ಲೋಕಾಯುಕ್ತನಾಗಿದ್ದಾಗ ಒಂದೇ ಒಂದು ಆರೋಪ ಬಾರದ ವ್ಯಕ್ತಿ ಶ್ರೀನಿವಾಸ್ ಪ್ರಸಾದ್. ಇಂತವಹರಿಗೆ ಒಂದು ಸಲಾಮ್ ಹೊಡೆಯಬೇಕೆನ್ನಿಸುತ್ತದೆ. ಇಂತಹವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದು ಬೇಡ. ನಿಮ್ಮಂತಹ ರಾಜಕಾರಣಿಗಳು ರಾಜಕೀಯದಲ್ಲಿ ಇರಬೇಕು. ಇಂದಿನ ರಾಜಕಾರಣಕ್ಕೆ ನಿಮ್ಮಂತವರ ಅಗತ್ಯವಿದೆ. ಚುನಾವಣೆಗೆ ನಿಲ್ಲದಿದ್ದರೂ ಸರಿ ರಾಜಕಾರಣದಲ್ಲಿ ಇರಿ ಎಂದು ಸಲಹೆ ನೀಡಿದರು.