ಉಡುಪಿ: ರಾಜ್ಯದಲ್ಲಿರುವುದು ದಪ್ಪ ಚರ್ಮದ, ಎಮ್ಮೆ ಚರ್ಮದ ಸರ್ಕಾರ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಉಡುಪಿಯ ಕಾರ್ಕಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರೋದು ಸಂವೇದನಾಶೀಲತೆ ಇಲ್ಲದ ಭಂಡ ಸರ್ಕಾರ. 22 ಲಕ್ಷ ರೇಷನ್ ಕಾರ್ಡ್, 12 ಲಕ್ಷ ಬಗರ್‌ಹುಕುಂ ಜಮೀನು ತಿರಸ್ಕಾರ ಮಾಡಲು ಹೊರಟಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಆರ್ಭಟ ಮಾಡುತ್ತಿದೆ. ಮೈಕ್ರೋ ಫೈನಾನ್ಸ್ಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬAಧಪಟ್ಟ ಯಾವುದೇ ವಸ್ತುಗಳು ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
Advertisement
ಬಿಟ್‌ಕಾಯಿನ್ ಜಾಲದಲ್ಲಿ ಮೊಹಮ್ಮದ್ ನಲಪಾಡ್ ಸಿಲುಕಿರುವ ಬಗ್ಗೆ ಮಾತನಾಡಿ, ಇದು 60 ಪರ್ಸೆಂಟ್ ಸರ್ಕಾರ. ಎಲ್ಲ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನ ಕಾರ್ಯಕರ್ತರು ಬ್ರೋಕರ್‌ಗಳಾಗಿದ್ದಾರೆ. ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿಟ್ ಕಾಯಿನ್‌ನಲ್ಲಿ ಸಿಲುಕಿದ್ದಾರೆ. ಆರಂಭದಲ್ಲೇ ತೀವ್ರ ವಿಚಾರಣೆ ಮಾಡದೆ ಇರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
Advertisement
ಹಣ ಚುನಾವಣೆಗಾಗಿ ಹೈಕಮಾಂಡ್‌ಗೆ ಹೋಗಿದೆ ಎಂಬ ಕಾರಣಕ್ಕೆ ಸಾಫ್ಟ್ ಕಾರ್ನರ್ ತೋರಲಾಗಿದೆ. ಅಬಕಾರಿ ಇಲಾಖೆ ಹಣ ದೆಹಲಿ, ಮಹಾರಾಷ್ಟ್ರ ಮತ್ತು ಕೇಂದ್ರದ ಚುನಾವಣೆಗೆ ರವಾನೆಯಾಗಿದೆ. ಈ ಕಾರಣಕ್ಕೆ ತನಿಖೆಯನ್ನು ಬಹಳ ಮಂದಗತಿಯಲ್ಲಿ ಮಾಡುತ್ತಿದೆ ಎಂದು ಆರೋಪಿಸಿದರು.