ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ಮಾಫಿಯಾದವರು, ಕಳ್ಳರು ಹಾಗೂ ರೌಡಿಗಳಿಗೆ ಟಿಕೆಟ್ ಮಾರಿಕೊಂಡಿದೆ ಎಂದು ಸ್ವಪಕ್ಷೀಯ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೆ ಟಿಕೆಟ್ ನೀಡುವಾಗ ನನ್ನ ಹಾಗೂ ನಮ್ಮ ಬೆಂಬಲಿಗರನ್ನು ಕಡೆಗಣಿಸಿದೆ. ಚುನಾವಣೆಗಳಲ್ಲಿ ಸಜ್ಜನರಿಗೆ ಟಿಕೆಟ್ ನೀಡದೇ, ಮಾಫಿಯಾದವರು, ಕಳ್ಳರು ಹಾಗೂ ರೌಡಿ ಪಟ್ಟ ಹೊಂದಿರುವ ಮಂದಿಗೆ ಟಿಕೆಟನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಜಿಲ್ಲೆಯ ನಾಲ್ಕು ಜನ ಬಿಜೆಪಿ ಶಾಸಕರುಗಳು ನಿಷ್ಕ್ರಿಯರಾಗಿದ್ದಾರೆ. ಯಾರಿಗೂ ಸಹ ಸರ್ಕಾರಗಳ ಲೋಪಗಳ ವಿರುದ್ಧ ಹೋರಾಡುವ ತಾಕತ್ತಿಲ್ಲ. ಈ ಮೊದಲು ಕಾಂಗ್ರಸ್ಸಿನಲ್ಲಿದ್ದುಕೊಂಡು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿಯವರು ವಿರುದ್ಧ ಲಘುವಾಗಿ ಮಾತನಾಡಿದವರು, ಇಂದು ಬಿಜೆಪಿಯಲ್ಲಿ ಹಿಡಿತ ಸಾಧಿಸಿದ್ದಾರೆ ಎನ್ನುವ ಮೂಲಕ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv