Connect with us

Bengaluru City

ಫುಲ್ ಖುಷಿಯಲ್ಲಿ ಬಿಜೆಪಿಯ ಟಾಕ್ ಸ್ಟಾರ್ ಮಾಧುಸ್ವಾಮಿ

Published

on

ಬೆಂಗಳೂರು: ಬಿಜೆಪಿಯ ‘ಟಾಕ್ ಸ್ಟಾರ್’ ನೂತನ ಸಚಿವ, ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿ ಈಗ ಫುಲ್ ಖುಷಿಯಾಗಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದಕ್ಕಲ್ಲ. ಬದಲಾಗಿ ಇವರಿಗೆ ವಿಧಾನಸೌಧದಲ್ಲಿ ಸಿಕ್ಕಿದ ವಿಶೇಷ ಕೊಠಡಿಯಿಂದ ಸಂತೋಷದಲ್ಲಿದ್ದಾರೆ.

ವಿಧಾನಸೌಧದಲ್ಲಿರುವ ರೂಂ ನಂಬರ್ 316 ಮೇಲೆ ಎಲ್ಲರ ಕಣ್ಣು ಇತ್ತು. ಈ ರೂಂಗಾಗಿ ಹಲವು ಮಂದಿ ಬಿಜೆಪಿ ನಾಯಕರು ಮುಗಿಬಿದ್ದಿದ್ದರು. ಆದರೆ ಈ ಅದೃಷ್ಟದ ರೂಂ ಮಾಧುಸ್ವಾಮಿ ಅವರಿಗೆ ಸಿಕ್ಕಿದೆ.

ಅಷ್ಟಕ್ಕೂ ಈ ರೂಂ ಸ್ಪೆಷಲ್ ಅಂದ್ರೆ, ಇದು ಹೆಚ್ ಡಿ ರೇವಣ್ಣನವರು ಇದ್ದ ರೂಂ. ಪಕ್ಕಾ ವಾಸ್ತುಪ್ರಕಾರವೇ ಈ ರೂಂ ವಿನ್ಯಾಸ ಬದಲಾಗಿದ್ದು ರೇವಣ್ಣ ವಾಸ್ತುವನ್ನು ಮಾಧುಸ್ವಾಮಿ ಫಾಲೋ ಮಾಡಿದ್ದಾರೆ. ಈ ರೂಂ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿರುವ ಮಾಧುಸ್ವಾಮಿ ಪೂಜೆ ಮಾಡಿ ಕಚೇರಿ ಪ್ರವೇಶಿಸಿದರು.

ವಿಶೇಷ ಅಂದರೆ ರೇವಣ್ಣ ಯಾವ ದಿಕ್ಕಿಗೆ ಕುರ್ಚಿ ಟೇಬಲ್ ಹಾಕಿದ್ದಾರೋ ಅದನ್ನು ಬದಲಾಯಿಸದೇ ರೇವಣ್ಣ ವಾಸ್ತು ಸ್ಟೈಲ್‍ನ್ನು ಮಾಧುಸ್ವಾಮಿ ಫುಲ್ ಫಾಲೋ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನಾನು ವಾಸ್ತು ಮೇಲೆ ನಂಬಿಕೆಯಿಲ್ಲ. ಆದರೆ ಆದರೆ ರೇವಣ್ಣನವರು ಈ ಕಚೇರಿಯಲ್ಲಿ ಕುಳಿತಿದ್ದಾರೆ. ರೇವಣ್ಣನವರ ಮೇಲೆ ನನಗೆ ಭಾರೀ ವಿಶ್ವಾಸವಿದೆ ಎಂದು ಚಟಾಕಿ ಹಾರಿಸಿದರು.

ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ ದೇವೇಗೌಡರು ಬಿಜೆಪಿ ಪರ ಸಾಫ್ಟ್ ಕಾರ್ನರ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ, ಈ ವಿಚಾರ ನನಗೆ ಗೊತ್ತಿಲ್ಲ. ಅವರು ಸಾಫ್ಟ್ ಕಾರ್ನರ್ ಆಗುವುದಿಲ್ಲ. ಕುಮಾರಸ್ವಾಮಿ ಅವರೇ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಿರುವಾಗ ಅವರು ಸಾಫ್ಟ್ ಕಾರ್ನರ್ ಆಗಿದ್ದಾರೆ ಎಂದು ನಾನು ತಿಳಿಯುವುದಿಲ್ಲ ಎಂದು ಉತ್ತರಿಸಿದರು.

ಈ ಹಿಂದೆ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ವಿಧಾನಸಭೆಯನ್ನು ಈಗಲೇ ವಿಸರ್ಜಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕೇಳಲ್ಪಟ್ಟೆ. ಆದರೆ ಇಂದು ಅಂತಿಮವಾಗಲಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಪರಸ್ಪರ ವಾಗ್ದಾಳಿ ನಡೆಸಿದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಈ ವಿಚಾರದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ನೀವೇ ಸುದ್ದಿ ಮಾಡುವವರು. ನಿಮಗೆ ಗೊತ್ತಿದ್ದರೆ ಹೇಳಿ ಎಂದು ಯಾವುದೇ ಪ್ರತಿಕ್ರಿಯೆ ನೀಡದೇ ಮಾತು ಮುಂದುವರಿಸಿದರು.

 

Click to comment

Leave a Reply

Your email address will not be published. Required fields are marked *

www.publictv.in