ಬೆಂಗಳೂರು: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ಕಾಂಗ್ರೆಸ್ ಶಾಸಕರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ (Renukacharya), ಶಾಸಕ ರವಿ ಗಣಿಗಗೆ (Ravi Ganiga) ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಶಾಸಕರ ಆಪರೇಷನ್‌ಗೆ ಬಿಜೆಪಿ 100 ಕೋಟಿ ಅಫರ್ ಮಾಡ್ತಿದೆ ಎಂಬ ರವಿ ಗಣಿಗ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು 50 ಕೋಟಿ ಅಂದ್ರು. ಆನಂತರ 100 ಕೋಟಿ ಅಂದ್ರು. ಎಲ್ಲೋ ಒಂದು ಕಡೆ ಕಾಂಗ್ರೆಸ್ ಶಾಸಕರು ಡಿಮ್ಯಾಂಡ್ ಕ್ರಿಯೇಟ್ ಮಾಡ್ಕೋತಿದಾರೆ. ಆರೋಪ ಮಾಡೋ ರವಿ ಗಣಿಗ ದಾಖಲೆ ಬಿಡುಗಡೆಗೆ ಆಗ್ರಹಿಸಿದ್ದೇವೆ. ನಿವೃತ್ತ ನ್ಯಾಯಮೂರ್ತಿ ಅವರಿಂದ ತನಿಖೆ ಮಾಡಿಸಬಹುದಿತ್ತು. ಆದ್ರೆ ಸುಳ್ಳು ಸುದ್ದಿ ಹಬ್ಬಿಸಿದ್ದೀರಿ. ರವಿ ಗಣಿಗ ಅವರೇ ಧರ್ಮಸ್ಥಳಕ್ಕೆ ಬರುತ್ತೀರಾ ಆಣೆ ಮಾಡಲು? ಈ ರಾಜ್ಯದ ಜನರ ಕ್ಷಮೆ ಕೇಳಿ ಅಂತಾ ಸಿಎಂ ಮತ್ತು ಕೈ ಸಚಿವರಿಗೆ ಆಗ್ರಹಿಸುತ್ತೇನೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ – ಬಸವರಾಜ ಬೊಮ್ಮಾಯಿ
ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದಿದ್ದಕ್ಕೆ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಒಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ ಸಮಾಧಾನದಿಂದ ಉತ್ತರಿಸಬೇಕಿತ್ತು. ಬದಲಾಗಿ ವಿದ್ಯಾರ್ಥಿ ಮೇಲೆ ದೌರ್ಜನ್ಯದ ಮಾತಾಡಿದ್ದಾರೆ. ಇದೊಂದು ತೊಘಲಕ್ ದರ್ಬಾರ್. ಹುಷಾರ್.. ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ. ಹುಷಾರ್ ಎಂದು ಮಧು ಬಂಗಾರಪ್ಪಗೆ ಎಚ್ಚರಿಕೆ ಕೊಟ್ಟರು.