BelgaumDistrictsKarnatakaLatestMain Post

ದೆಹಲಿ ವರಿಷ್ಠರು ಇದ್ದಾರೆ ಅಂತ ನಾನು ಜೀವಂತ ಇದ್ದೀನಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ದೆಹಲಿ ವರಿಷ್ಠರು ಇದ್ದಾರೆ ಅಂತ ನಾನು ಜೀವಂತ ಇದ್ದೀನಿ. ಇಲ್ಲದಿದ್ರೆ ನನ್ನನ್ನು ಇಷ್ಟೊತ್ತಿಗೆ ಮುಗಿಸ್ತಿದ್ದರು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ದೊಡ್ಡ ನಾಯಕನಾಗಿ ಹೊರಹೊಮ್ಮಿದ್ದೇನೆ. ಬಿಜೆಪಿ ವರಿಷ್ಠರು ವಿಶ್ವಾಸ ಇಟ್ಟಿದ್ದಕ್ಕೆ ಜೀವಂತ ಇದ್ದೀನಿ. ಇಲ್ಲದಿದ್ರೆ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸ್ತಿದ್ದರು. ಬಿಜೆಪಿ ವರಿಷ್ಠರು, ಸಂಘ ಪರಿವಾರದ ಆರ್ಶೀವಾದದಿಂದ ಬದುಕಿದ್ದೀನಿ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ವಿಧಾನ ಪರಿಷತ್ ಚುನಾವಣೆ ಅಖಾಡ ಗರಿಗೆದರಿದೆ. ಪಂತ ಬಾಳೆಕುಂದ್ರಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ತಮ್ಮ ಲಖನ್ ಜಾರಕಿಹೊಳಿ ಪಕ್ಷೇತರವಾಗಿ ಕಣಕ್ಕಿಳಿಸಿದ ಬಗ್ಗೆ ಮೊದಲ ಬಾರಿ ರಮೇಶ್ ಜಾರಕಿಹೊಳಿ, ಪಕ್ಷೇತರ ಅಭ್ಯರ್ಥಿ ಏಕೆ ಹಾಕಿದೆ ಅಂತಾ ಕನ್ಫ್ಯೂಷನ್ ಇರಬಹುದು. ಕಾಂಗ್ರೆಸ್ ಸೋಲಿಸಲು ಪಕ್ಷೇತರ ಅಭ್ಯರ್ಥಿ ಹಾಕಲಾಗಿದೆ. ನಾನು ಮೂರು ತಿಂಗಳ ಮೊದಲೇ ನಮ್ಮ ವರಿಷ್ಠರಿಗೆ ಹೇಳಿದ್ದೆ. ವಿವೇಕರಾವ್ ಪಾಟೀಲ ಕಳೆದ ಬಾರಿ ಬಂಡುಕೋರರಾಗಿ ಆರಿಸಿ ಬಂದರು. ಸತತ 6 ವರ್ಷ ಕಾಂಗ್ರೆಸ್ ಪರ ಕೆಲಸ ಮಾಡಿದ್ರು ಎಂದರು. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

ವಿವೇಕರಾವ್ ಪಾಟೀಲ್ ಕುರುಬ ಸಮುದಾಯದದಿಂದ ಬಂದ ಹಿಂದುಳಿದ ವರ್ಗದ ನಾಯಕ. ಕಾಂಗ್ರೆಸ್ ಪಕ್ಷ ಅವರಿಗೆ ಮೋಸ ಮಾಡಿತು. ಅಕಸ್ಮಾತ್ ವಿವೇಕರಾವ್ ಪಾಟೀಲ್‍ಗೆ ಟಿಕೆಟ್ ನೀಡಿದ್ರೆ, ನನ್ನ ತಮ್ಮನ ಸ್ಪರ್ಧೆ ಮಾಡಿಸುತ್ತಿರಲಿಲ್ಲ. ನಾನು ಕಾಂಗ್ರೆಸ್ ಸೋಲಿಸಲು ಪಕ್ಷೇತರ ಅಭ್ಯರ್ಥಿಯನ್ನ ಹಾಕಿದ್ದು. ಮೊದಲು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಆರಿಸಿ ಬರಬೇಕು. ಮಹಾಂತೇಶ ಕವಟಗಿಮಠ ಗೆಲುವಿಗೆ ಎಲ್ಲ ತ್ಯಾಗಕ್ಕೂ ಸಿದ್ಧ. ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು ಎಂದು ಹೇಳಿದರು.

Leave a Reply

Your email address will not be published.

Back to top button