ಯಾದಗಿರಿ: ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮಗ ನಾಮಪತ್ರ ಸಲ್ಲಿಸಿದ ಅರ್ಧ ಗಂಟೆಯಲ್ಲಿ ತಾಯಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಸಚಿವ ರಾಜುಗೌಡ ನರಸಿಂಹ ನಾಯಕ ಸುರಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಗ ನಾಮಪತ್ರ ಸಲ್ಲಿಸಿದ ಅರ್ಧ ಗಂಟೆಯಲ್ಲೇ ರಾಜುಗೌಡರ ತಾಯಿ ತಿಮ್ಮಮ್ಮಾ ಶಂಭನಗೌಡ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಮಗನ ಅರ್ಜಿ ತಿರಸ್ಕೃತವಾದ್ರೆ, ತಾಯಿಗೆ ಅವಕಾಶ ಸಿಗಲಿ ಎಂದು ಈ ರೀತಿಯಾಗಿ ತಾಯಿ-ಮಗ ನಾಮಪತ್ರ ಸಲ್ಲಿಸಿದ್ದಾರೆ.
Advertisement
Advertisement
ಈ ಹಿಂದೆ ಅಂದರೆ 2004 ರಲ್ಲಿ ಕೆಎನ್‍ಡಿಪಿ(ಕ್ಯಾಮರೂನ್ ನ್ಯಾಶನಲ್ ಡೆಮಾಕ್ರಟಿಕ್ ಪಾರ್ಟಿ) ಪಕ್ಷದಿಂದ ರಾಜುಗೌಡ ಸ್ಪರ್ಧಿಸಿ ಗೆದ್ದಿದ್ದರು. ನಂತರ 2008 ರಲ್ಲಿ ಬಿಜೆಪಿ ಪಕ್ಷದಿಂದ ನಿಂತು ಜಯದ ಮಾಲೆ ಧರಿಸಿದ್ರು. ಆದ್ರೆ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ್ ವಿರುದ್ಧ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 4,075 ಮತಗಳ ಅಂತರದಿಂದ ಸೋಲು ಕಂಡಿದ್ದರು. ವೆಂಕಟಪ್ಪ ನಾಯಕ್ ಅವರು 65,033 ಮತ ಪಡೆದು ಶಾಸಕರಾಗಿದ್ರು.
Advertisement
2013ರ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ತಿಮ್ಮಮ್ಮ ನಾಮಪತ್ರ ಸಲ್ಲಿಸಿದ್ದರು.
Advertisement