ಮಂಡ್ಯ: ಜೆಡಿಎಸ್(JDS) ತೊರೆದು ಬಿಜೆಪಿ(BJP) ಸೇರಿದ್ದ ಮಾಜಿ ಶಾಸಕ ನಾರಾಯಣ ಗೌಡ (Naryana Gowda) ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಅಸಮಾಧಾನಗೊಂಡಿರುವ ನಾರಾಯಣ ಗೌಡ ಈಗ ಕಾಂಗ್ರೆಸ್ (Congress) ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಮಾತಿಗೆ ಪೂರಕ ಎಂಬಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ನಾರಾಯಣ ಗೌಡ ಭೇಟಿಯಾಗಿದ್ದಾರೆ. ಇದನ್ನೂ ಓದಿ: Loksabha Election: ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ?
- Advertisement
ಮಂಡ್ಯ (Mandya) ಕ್ಷೇತ್ರವನ್ನು ಬಿಜೆಪಿಗೆಯೇ ಬಿಟ್ಟುಕೊಡಬೇಕು, ಇಲ್ಲವಾದಲ್ಲಿ ನಾನು ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ನಾರಾಯಣಗೌಡ ಹಿಂದೆ ಬಹಿರಂಗವಾಗಿ ಹೇಳಿದ್ದರು. ಸದ್ಯ ಮಂಡ್ಯ ಕ್ಷೇತ್ರವನ್ನು ಬಹುತೇಕ ಬಿಜೆಪಿ ಜೆಡಿಎಸ್‌ಗೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರದಿಂದ ನಾರಾಯಣಗೌಡ ಬೇಸರಗೊಂಡಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.
- Advertisement
ಸಿದ್ದರಾಮಯ್ಯ ಅವರ ಭೇಟಿ ವೇಳೆ ನಾನು ಕಾಂಗ್ರೆಸ್ ಸೇರಿಕೊಳ್ಳುತ್ತೇನೆ, ನನಗೆ ಮಂಡ್ಯ ಎಂಪಿ ಟಿಕೆಟ್ ನೀಡಿ ಎಂದು ನಾರಾಯಣಗೌಡ ಕೇಳಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಈಗ ಟಿಕೆಟ್ ನೀಡಲು ಸಾಧ್ಯವಿಲ್ಲ. ಮೊದಲು ಪಕ್ಷ ಸೇರ್ಪಡೆಯಾಗಬೇಕು. ಮುಂದೆ ಒಳ್ಳೆಯ ಸ್ಥಾನಮಾನ ನೀಡೋಣ ಎಂದು ನಾರಾಯಣಗೌಡಗೆ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನಾರಾಯಣಗೌಡ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿರುವ ಫೋಟೋವೊಂದು ವೈರಲ್ ಆಗಿದೆ. ಇದನ್ನೂ ಓದಿ: ಟೈಮ್ಸ್ ನೌ ಸಮೀಕ್ಷೆ – NDA 366, INDIA 104 ಸೀಟ್: ಕರ್ನಾಟಕದಲ್ಲಿ ಬಿಜೆಪಿ ದಳ ಮೈತ್ರಿಗೆ 23 ಸ್ಥಾನ