ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಬಳ್ಳಾರಿ ರಾಜಕೀಯ ಸಂಚಲನ ಮೂಡಿಸಿದೆ. ಬಿಜೆಪಿಗೆ ಪುನರ್ ಪ್ರವೇಶ ಮಾಡಲು ಜನಾರ್ದನ ರೆಡ್ಡಿ ರಣತಂತ್ರ ಮಾಡುತ್ತಿದ್ದಾರೆ.
ಬಳ್ಳಾರಿಯಲ್ಲಿ ರಹಸ್ಯ ಸಭೆ ಮಾಡಿರುವ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ಹೈಕಮಾಂಡ್ ಮನವೊಲಿಕೆಗೆ ಯತ್ನ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿಗೆ ಬರಲು ರೆಡ್ಡಿ ಆಸಕ್ತಿ ತೋರಿದರೂ ಸಕ್ರಿಯ ರಾಜಕೀಯಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ ಎನ್ನಲಾಗುತ್ತಿದೆ.
Advertisement
Advertisement
ಅನುಮಾನ ಯಾಕೆ?
ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಗಣಿಗಾರಿಕೆಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ರೆಡ್ಡಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಗಣಿ ಲೂಟಿ ಹೊಡೆದ ಗಂಭೀರ ಆರೋಪ ಇರುವ ಕಾರಣ ರೆಡ್ಡಿಗೆ ಅವಕಾಶ ನೀಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು.
Advertisement
ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದ್ದು ಈ ವೇಳೆ ಗ್ರೀನ್ ಸಿಗ್ನಲ್ ನೀಡಿದರೆ ಕಾಂಗ್ರೆಸ್‍ಗೆ ಬಿಜೆಪಿಯೇ ಪ್ರಮುಖ ರಾಜಕೀಯ ಅಸ್ತ್ರ ನೀಡಿದಂತಾಗುತ್ತದೆ. ಈ ಹಿಂದೆ ರೆಡ್ಡಿ ಬ್ರದರ್ಸ್ ವಿರುದ್ಧ ಪಾದಯಾತ್ರೆ ಮಾಡಿ ಕಾಂಗ್ರೆಸ್ ಗೆದ್ದಿತ್ತು. ಇದನ್ನೂ ಓದಿ: ವಾಜಪೇಯಿ ನಂತರ ಮೋದಿ ಬಂದಂತೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ: ಯತ್ನಾಳ್
Advertisement
ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅವಕಾಶ ಕೊಟ್ಟರೆ ಆದಾಯ ತೆರಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಡಿಕೆ ಶಿವಕುಮಾರ್ ವಿರುದ್ಧ ರಾಜಕೀಯ ದಾಳಿಗೆ ಕಷ್ಟವಾಗಬಹುದು. ಜನಾರ್ದನ ರೆಡ್ಡಿಗೆ ಈ ಹಿಂದಿನ ವರ್ಚಸ್ಸು ಉಳಿದಿಲ್ಲ. ಪ್ರಸ್ತುತ ರೆಡ್ಡಿ ಹಿಂದೆ ದೊಡ್ಡ ಪ್ರಮಾಣದ ವೋಟ್ ಬ್ಯಾಂಕ್ ಇಲ್ಲ. ಅಷ್ಟೇ ಅಲ್ಲದೇ ಸದ್ಯ ಜಾಮೀನು ಮೇಲೆ ರೆಡ್ಡಿ ಹೊರಗಿರುವ ಕಾರಣ ಇತರ ನಾಯಕರು ಬೆಂಬಲಿಸುವುದು ಅನುಮಾನ. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ
ಚುನಾವಣಾ ಪ್ರಚಾರದ ಸಮಯದಲ್ಲಿ ಸ್ವಚ್ಛ ಆಡಳಿತ ನೀಡಿ ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಒಂದು ವೇಳೆ ರೆಡ್ಡಿಯನ್ನು ಸೇರ್ಪಡೆಗೊಳಿಸಿದರೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಬಿಜೆಪಿ, ಮೋದಿ ಇಮೇಜ್‍ಗೆ ಧಕ್ಕೆಯಾಗಲಿದೆ. ಈ ಎಲ್ಲ ಕಾರಣಗಳಿಂದ ರೆಡ್ಡಿ ಬಿಜೆಪಿ ಪ್ರವೇಶಕ್ಕೆ ಅನುಮತಿ ನೀಡುವುದು ಅನುಮಾನ ಎನ್ನಲಾಗುತ್ತಿದೆ.