ಶಿವಮೊಗ್ಗ: ಶಬರಿಮಲೆಯಲ್ಲಿ (Sabarimala) ಅವ್ಯವಸ್ಥೆಯ ಆಗರವಾಗಿದೆ. ಕೇರಳ ಸರ್ಕಾರವು ಇದನ್ನು ಶೀಘ್ರವಾಗಿ ಸರಿಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಒತ್ತಾಯಿಸಿದರು.
ಈ ಸಂಬಂಧ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭಕ್ತರ ನೂಕುನುಗ್ಗಲಿಗೆ ಎಂಟು ವರ್ಷದ ಮಗು ಬಲಿಯಾಗಿದೆ. ರಸ್ತೆ ಬದಿಯಲ್ಲಿ ಮಲಗಿದ್ದ ಯುವಕನ ಮೇಲೆ ಬಸ್ ಹರಿದು ಕಾಲು ಊನವಾಗಿದೆ. ಕೇರಳ ಸರ್ಕಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.
Advertisement
Advertisement
ನಾನು ಸಹ ಎರಡು ಬಾರಿ ಶಬರಿಮಲೆಗೆ ಹೋಗಿದ್ದೇನೆ. ಆಗ ಇಂತಹ ಸಮಸ್ಯೆ ಇರಲಿಲ್ಲ. ಈಗ ಬೇಕುಂತಲೇ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಕೇರಳ ಸರ್ಕಾರ (Kerala Govt) ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು. ಇಲ್ಲದಿದ್ದರೆ ರಾಜ್ಯದ ಅಯ್ಯಪ್ಪ (Ayyappa) ಭಕ್ತರು ಸೇರಿಕೊಂಡು ಕೇರಳದಲ್ಲಿ ದೊಡ್ಡ ಆಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮಲೆನಾಡಿಗರನ್ನೂ ಬಿಟ್ಟೂ ಬಿಡದೇ ಕಾಡ್ತಿದೆ ಮಂಗನ ಕಾಯಿಲೆ – ವರ್ಷದ ಮೊದಲ ಕೇಸ್ ಪತ್ತೆ, ಹೆಚ್ಚಿದ ಆತಂಕ
Advertisement
Advertisement
ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಈಶ್ವರಪ್ಪ ಆಗ್ರಹಿಸಿದರು.