– ಸಿಂಧಗಿ ಮಠಕ್ಕೆ ಮಾಜಿ ಸಚಿವರ ಕುಟುಂಬ ಭೇಟಿ
ಹಾವೇರಿ: ಮಗನಿಗೆ ರಾಜಕೀಯ ನೆಲೆ ಕಲ್ಪಿಸಿಕೊಡಲು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಪ್ರಯತ್ನ ಪಡುತ್ತಿದ್ದಾರೆ.
ಈಶ್ವರಪ್ಪ ಅವರ ಪತ್ನಿ, ಪುತ್ರ ಕೆ. ಈ ಕಾಂತೇಶ್, ಜೊತೆ ಸಿಂಧಗಿ ಮಠಕ್ಕೆ ಆಗಮಿಸಿದ್ದಾರೆ. ಸಿಂಧಗಿ ಮಠದಲ್ಲಿ ಶತರುದ್ರಾಭಿಷೇಕ, ಹಾಗೂ ರುದ್ರ ಹೋಮ ಹಮ್ಮಿಕೊಂಡಿದ್ದಾರೆ. ಈಶ್ವರಪ್ಪ ಅವರ ಈ ನಡೆ ರಾಜಕೀಯವಾಗಿಯೂ ಬಹಳ ಮಹತ್ವ ಪಡೆದಿದೆ.
ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ (Haveri Loksabha Contituency Ticket) ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಫುಲ್ ಆಕ್ಟೀವ್ ಆಗಿದ್ದಾರೆ. ಈ ಬಾರಿ ತಮ್ಮ ಪುತ್ರ ಕೆ. ಈ ಕಾಂತೇಶ್ (K. E Kantesh) ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈಗಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆ.ಈ ಕಾಂತೇಶ್ ಫುಲ್ ಆಕ್ಟೀವ್ ಆಗಿಯೇ ಓಡಾಡುತ್ತಿದ್ದು, ಕೆಲ ದಿನಗಳ ಹಿಂದೆ ಸಿಂಧಗಿ ಮಠಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈಗ ತಮ್ಮ ತಂದೆ ಕೆ.ಎಸ್ ಈಶ್ವರಪ್ಪ ಜೊತೆ ಆಗಮಿಸಿ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಹಳೆಯ ವಿದ್ಯಾರ್ಥಿಗಳಿಂದ ಸದ್ದಿಲ್ಲದೇ ನಡೆಯುತ್ತಿದೆ ಸರ್ಕಾರಿ ಶಾಲೆಗೆ ಬಣ್ಣ, ಶೌಚಾಲಯ ನಿರ್ಮಾಣ ಕೆಲಸ
ಮಗನಿಗೆ ಟಿಕೆಟ್ ಪಡೆಯಲು ಈಗಾಗಲೇ ಪ್ರಯತ್ನ ಮಾಡುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿರುವ ಈಶ್ವರಪ್ಪ, ಹಾವೇರಿ ಜಿಲ್ಲೆಯಲ್ಲಿ ನಮ್ಮದೆ ಆದ ವೋಟ್ ಬ್ಯಾಂಕ್ ಇದೆ. ಪಕ್ಷ ತಿರ್ಮಾನಿಸಿದ್ರೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು.
Web Stories