ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಡಾ. ಕೆ.ಸುಧಾಕರ್ (Dr. K. Sudhakar) ಅವರಿಗೆ ಭಾರೀ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ.
ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದ 29 ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಮಾಜಿ ಸಚಿವ ಡಾ. ಕೆ.ಸುಧಾಕರ್ ಸ್ವಗ್ರಾಮ ಪೆರೇಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಸುಧಾಕರ್ ಚಿಕ್ಕಪ್ಪ ರವೀಂದ್ರ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸುಧಾಕರ್ ಅವರಿಗೆ ಮುಖಭಂಗ ಆಗಿದೆ ಅಂತ ವ್ಯಾಖ್ಯಾನ ಮಾಡಲಾಗುತ್ತಿದೆ. ಇದನ್ನೂ ಓದಿ: ಸುಧಾಕರ್ ನಮ್ಮೂರ ಹುಡ್ಗ, ಬೇರೆ ಕ್ಷೇತ್ರ ನೋಡಿಕೊಂಡ್ರೆ ಮುಂದಿನ ಸಲ ವಿಧಾನಸೌಧಕ್ಕೆ ಬರ್ತಾರೆ: ಪ್ರದೀಪ್ ಈಶ್ವರ್ ಟಾಂಗ್
Advertisement
Advertisement
ಅಂದಹಾಗೆ ಬುಧವಾರ ನಡೆದ ಚುನಾವಣೆಯಲ್ಲಿ ಪೆರೇಸಂದ್ರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಕೆ.ಗಂಗರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಭೋಯಿನಹಳ್ಳಿ ಗ್ರಾಮದ ಸದಸ್ಯೆ ವೆಂಕಟಪತಿ ಆಯ್ಕೆಯಾಗಿದ್ದಾರೆ. ಇನ್ನೂ ಸುಧಾಕರ್ ಬೆಂಬಲಿತ ಸದಸ್ಯರಾದ ವಿ. ಗಂಗರತ್ನಮ್ಮ ಹಾಗೂ ಪಿ.ಎಲ್ ಅನಂದ್ ಸೋಲನುಭವಿಸಿದ್ದಾರೆ.
Advertisement
Advertisement
ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಕಾಂಗ್ರೆಸ್ ಬೆಂಬಲಿತರು ಅಂತಲೇ ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ಗೆಲುವು ಅಂತ ಚರ್ಚೆ ಮಾಡಲಾಗುತ್ತಿದೆ. ಆದರೆ ಇದನ್ನ ಮಾಜಿ ಸಚಿವ ಸುಧಾಕರ್ ತಳ್ಳಿಹಾಕಿದ್ದಾರೆ. ಪೆರೇಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ನಮ್ಮವರೇ. ಎರಡು ಬಣಗಳಿವೆ. ಎರಡು ಬಣದವರೂ ನಮ್ಮವರೇ. ಕಾಂಗ್ರೆಸ್ ಆಧಿಕಾರ ಹಿಡಿದಿದೆ ಅನ್ನೋದು ಸುಳ್ಳು ಅಂತ ಹೇಳಿದ್ದಾರೆ. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್‌ಗೆ ಸುಧಾಕರ್ ಸವಾಲು
Web Stories