ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮೊದಲ ಗೂಟದ ಕಾರ್ ಕಂಡಿದ್ದು, ಬಿಜೆಪಿಯಿಂದ (BJP) ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (K.S.Eshwarappa), ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ದೋಸ್ತಿಗೆ (BJP-JDS Alliance) ಸಿದ್ದರಾಮಯ್ಯ ಲೇವಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯಗೆ ಜಾತ್ಯತೀತ ಅನ್ನೋದು ಅಧಿಕಾರ ಹಿಡಿಯೋಕೆ ಮಾತ್ರನಾ? ಮೊದಲು ಇದನ್ನ ಹೇಳಲಿ. ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ಬರೋಕೆ ಬಿಜೆಪಿ ಕಾರಣ. ಬಿಜೆಪಿ ಸಹಕಾರ ಕೊಡದೇ ಹೋಗಿದ್ರೆ ಕಾಂಗ್ರೆಸೇತರ ಸರ್ಕಾರ ಬರುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್
Advertisement
Advertisement
ರಾಮಕೃಷ್ಣ ಹೆಗಡೆ ಸಿಎಂ ಆದಾಗ ಶಾಸಕರಾಗಿದ್ದ ಸಿದ್ದರಾಮಯ್ಯ ಅವರನ್ನ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ್ರು. ಮೊದಲ ಗೂಟದ ಕಾರ್ ಕಂಡಿದ್ದು ಸಿದ್ದರಾಮಯ್ಯ ಬಿಜೆಪಿಯಿಂದ. ಅವತ್ತೇ ಸಿದ್ದರಾಮಯ್ಯ ಬಿಜೆಪಿ ಕೋಮುವಾದಿ ಪಕ್ಷ ಬೆಂಬಲ ಬೇಡ ಅಂತ ಹೇಳಬೇಕಿತ್ತು. ಬಿಜೆಪಿ ಜಾತಿವಾದಿ, ಹಿಂದುತ್ವ ಪಕ್ಷ. ನನಗೆ ಯಾವುದೇ ಸಮಿತಿ ಬೇಡ ಅಂತ ಹೇಳಬೇಕಿತ್ತು. ರಾಮಕೃಷ್ಣ ಹೆಗಡೆ ಅವರಿಗೆ ಬಿಜೆಪಿ ಬೆಂಬಲ ಪಡೆಯಬೇಡಿ ಅಂತ ಹೇಳಬೇಕಿತ್ತು ಎಂದು ಕಿಡಿಕಾರಿದರು.
Advertisement
ಅಧಿಕಾರ ಬೇಕು ಅಂದಾಗ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯವಾದಿ. ಅಧಿಕಾರ ಇಲ್ಲ ಅಂದರೆ ಬಿಜೆಪಿ ಕೋಮುವಾದಿನಾ ಅಂತ ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಕಿಡಿಕಾರಿದರು. ಜನ ಇದನ್ನ ನೋಡಿ ಕಾಂಗ್ರೆಸ್‌ನ್ನ ದೇಶದಲ್ಲಿ ಮೂಲೆಗೆ ತಳ್ಳಿದ್ದಾರೆ. ಬಿಜೆಪಿಗೆ ಇಡೀ ದೇಶದಲ್ಲಿ ಬೆಂಬಲ ಕೊಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ, ಜಾತಿವಾದಿ ಸಿದ್ದರಾಮಯ್ಯ ಸರ್ಕಾರವನ್ನ ಮನೆಗೆ ಕಳಿಸ್ತಾರೆ. ಲೋಕಸಭೆ ಚುನಾವಣೆ ಹಿಂದೆ-ಮುಂದೆಯೇ ಈ ಸರ್ಕಾರ ಇರೋದಿಲ್ಲ ಎಂದು ಬಾಂಬ್ ಸಿಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಣಯ
Advertisement
ಬಿಜೆಪಿ-ಜೆಡಿಎಸ್ 28ಕ್ಕೆ 28 ಸೀಟು ಗೆಲ್ತೀವಿ. ಕಳೆದ ಬಾರಿ ಒಂದು ಸೀಟು ಕಾಂಗ್ರೆಸ್ ಪಡೆದಿತ್ತು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಈ ಬಾರಿ ಒಂದೂ ಸೀಟು ಪಡೆಯೊಲ್ಲ. 28 ಸ್ಥಾನ ಬಿಜೆಪಿ-ಜೆಡಿಎಸ್ ಪಡೆಯುತ್ತದೆ ಎಂದು ಭವಿಷ್ಯ ನುಡಿದರು.
ಲೋಕಸಭೆ ಆದ ಮೇಲೆ ಈ ಸರ್ಕಾರ ಇರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಈ ಸರ್ಕಾರ ಬೀಳಿಸೋದಿಲ್ಲ. ಹರಿಪ್ರಸಾದ್‌ಗೆ ನಾವು ಹೇಳಿ ಕೊಟ್ಟದ್ವಾ? ಹರಿಪ್ರಸಾದ್ ಏನ್ ಹೇಳಿದ್ರು? ನನ್ನ ಬಾಯಲ್ಲಿ ಅಂತಹ ಮಾತು ಬರೊಲ್ಲ. ಸಿದ್ದರಾಮಯ್ಯ ನನ್ನ ಹೆಸರೇ ಹರಿಪ್ರಸಾದ್ ಹೇಳಿಲ್ಲ ಅಂದ್ರು. ಹಾಗಾದ್ರೆ ಯಾಕೆ ದೆಹಲಿಯಲ್ಲಿ ದೂರು ಕೊಟ್ಟರು. ಹರಿಪ್ರಸಾದ್‌ಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ. ಹರಿಪ್ರಸಾದ್ ಹೇಳಿದ್ದು ಸತ್ಯ ಅಂತ ಕೇಂದ್ರದ ನಾಯಕರು ಒಪ್ಪಿದ ಮೇಲೆ ಸಿದ್ದರಾಮಯ್ಯ ಅವರೇ ನೀವು ಒಪ್ಪಿಕೊಳ್ಳಿ. ಸಿದ್ದರಾಮಯ್ಯ ಅವರೇ ನೀವು ಇದರ ಬಗ್ಗೆ ಮಾತಾಡಿ ಅಂತ ಸಿದ್ದರಾಮಯ್ಯಗೆ ಪ್ರಶ್ನೆ ಹಾಕಿದರು.
Web Stories