Connect with us

Bengaluru City

ಮಕ್ಕಳಿಂದ 4 ವರ್ಷ ನನ್ನ ದೂರವಿರಿಸಿದ್ದ ಸಿದ್ದರಾಮಯ್ಯಗೆ ದೇವ್ರೇ ಬುದ್ಧಿ ಕಲಿಸಿದ್ದಾನೆ- ಜನಾರ್ದನ ರೆಡ್ಡಿ

Published

on

ಬೆಂಗಳೂರು: ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ ಜನಾರ್ದನ ರೆಡ್ಡಿ, ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದಾರೆ. ಇದನ್ನೂ ಓದಿ: 4 ವರ್ಷ ಜೈಲಲ್ಲಿ ಕೊಳೆಸಿದ್ರು – ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲ ಅಂದ್ರು ರೆಡ್ಡಿ

ಸಾಮಾನ್ಯ ಹಳ್ಳಿಗೆ ಹೋಗಿ ಕೇಳಿದ್ರು. ಜನರಿಗೆ ಇಷ್ಟೆಲ್ಲ ಕಷ್ಟ ಕೊಟ್ಟ ವ್ಯಕ್ತಿ ಅನುಭವಿಸುತ್ತಿದ್ದಾನೆ ಅಂತ ಜನ ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯನು ಸಾಮಾನ್ಯ ವ್ಯಕ್ತಿ, ದೇವರಲ್ಲ. ಮನುಷ್ಯ ಒಳ್ಳೆ ಹೆಸರು ತಗೆದುಕೊಂಡು ಮಣ್ಣಾದ್ನ. ಛೀ ಥೂ ಅಂದುಕೊಂಡು ಮಣ್ಣಾದ್ನ ಎಂಬುದು ಅವರವರ ಹಣೆ ಬರಹದಲ್ಲಿ ಬರೆದಿರುತ್ತೆ ಎಂದು ಮಾಜಿ ಸಿಎಂ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *