ಹುಬ್ಬಳ್ಳಿ: ಕಾಂಗ್ರೆಸ್ (Congress) ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ (Jabbar Khan Honnalli) ಅವರು ನಿಧನರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ (Hubballi) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲೆ ಮಾಡುವುದಾಗಿ ಹೆದರಿಸಿ ವೃದ್ಧೆ ಮೇಲೆ 1 ವರ್ಷ ನಿರಂತರ ಅತ್ಯಾಚಾರ
ಎಸ್.ಎಂ ಕೃಷ್ಣ (S. M. Krishna) ಸರ್ಕಾರದ ಸಂಪುಟದಲ್ಲಿ ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಯುವಜನ ಮತ್ತು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಜಬ್ಬಾರ್ ಖಾನ್ ಹೊನ್ನಳ್ಳಿ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜಿಮ್‍ಗಳಲ್ಲಿನ ಪ್ರೊಟೀನ್ ಪೌಡರ್‌ನಿಂದ ಸೈಡ್ ಎಫೆಕ್ಟ್- ಸಾಂಪಲ್ಸ್ ಲ್ಯಾಬ್‍ಗೆ ಕೊಟ್ಟ ಆರೋಗ್ಯ ಇಲಾಖೆ