ಹಾಸನ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಎಂ.ಎಲ್.ಸಿ. ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆಗೆ ಬಿಜೆಪಿ-ಕಾಂಗ್ರೆಸ್ ಟೀಕೆ ವಿಚಾರ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಯಾವುದು..? ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬಂದರು. ಯಡಿಯೂರಪ್ಪ ಅವರ ಮಕ್ಕಳು ರಾಜಕೀಯಕ್ಕೆ ಬಂದರು. ನಾವೇನು ಹಿಂದುಗಡೆ ಬಾಗಿಲಿನಿಂದ ಬರುತ್ತಿದ್ದೇವಾ ಎಂದು ಪ್ರಶ್ನಿಸುತ್ತಾ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ರಿಸರ್ವೇಷನ್ ಇಲ್ಲದಿದ್ದಾಗ ಹಿಂದುಳಿದ ವರ್ಗದವರನ್ನು ಜಿ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರೇನು ನಮ್ಮ ಕುಟುಂಬದವರಾ..? ಎಂದು ಇದೇ ವೇಳೆ ಜೆಡಿಎಸ್ ನಿಂದ ಅಧ್ಯಕ್ಷರನ್ನಾಗಿ ಮಾಡಿದವರ ಹೆಸರು ಹೇಳಿ ರೇವಣ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್, ಬಿಜೆಪಿ ಕಾನೂನು ತರಲಿ. ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಕಾನೂನು ತರಲಿ. ಆ ಕಾನೂನನ್ನು ನಾನು ಒಪ್ಪುತ್ತೇನೆ. ಜೆಡಿಎಸ್ ಪ್ರೊಡಕ್ಷನ್ ಪಾರ್ಟಿ. ಕಾಂಗ್ರೆಸ್-ಬಿಜೆಪಿಯಲ್ಲಿರುವವರೆಲ್ಲಾ ದೇವೇಗೌಡರ ಕಂಪನಿಲಿ ಸರ್ವಿಸ್ ಆಗಿರುವವರು. ಪ್ರೊಡಕ್ಷನ್ ಬೈ ಎಚ್.ಡಿ.ದೇವೇಗೌಡ ಬಿಜೆಪಿ-ಕಾಂಗ್ರೆಸ್ ನಲ್ಲಿರೋದು ಜೆಡಿಎಸ್ ಪ್ರೊಡಕ್ಷನ್ ನವರು ಎಂದರು.
Advertisement
Advertisement
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುಯ್ಲಿಗೆ ಬಂದಿದ್ದ ಜೋಳ, ರಾಗಿ, ಭತ್ತ ನಾಶವಾಗಿದೆ. 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಉದುರಿ ಹೋಗಿದೆ. 4,200 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಹಾಳಾಗಿದೆ. 2000 ಎಕರೆ ಪ್ರದೇಶದಲ್ಲಿ ತರಕಾರಿ, 1000 ಎಕರೆ ಪ್ರದೇಶದಲ್ಲಿ ಇತರೆ ಬೆಳೆಗಳು ನಾಶವಾಗಿದೆ. 420 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯ ಸರ್ಕಾರ ಸತ್ತೋಗಿದೆ. ಇದು ರೈತರ ಪರವಾದ ಸರ್ಕಾರವಲ್ಲ ಎಂದು ಹೇಳಿದರು.
ರೈತರನ್ನೇ ಮಟ್ಟ ಹಾಕಲು ಬಂದಿರುವ ಸರ್ಕಾರ. ಈ ಸರ್ಕಾರ ಯಾವಾಗ ಹೋಗುತ್ತೆ ಅಂಥಾ ಜನ ಶಾಪ ಹಾಕುತ್ತಿದ್ದಾರೆ. ಸರ್ಕಾರ ಎಲ್ಲಾ ಬೆಳೆಗಳಿಗೂ 6000 ಪರಿಹಾರ ನೀಡುತ್ತಿದೆ. ಯಾರೂ ಹೇಳೋರು ಕೇಳೋರು ಇಲ್ಲಾ. ಕುಮಾರಸ್ವಾಮಿ ಶಂಖ ಕೊಟ್ಟ ಊದುತ್ತಾ ಕೂತಿದ್ದಾರೆ. ಜನರ ಸತ್ತರೆ ಮಸಣಕ್ಕೆ ದುಡ್ಡು ಕೊಡ್ತೀವಿ ಅಂತ ಕೂತಿದ್ದಾರೆ. ಯಡಿಯೂರಪ್ಪ ಭಾಷಣ ಮಾಡಿದ್ದೇ ಮಾಡಿದ್ದು, ದೇವಸ್ಥಾನದ ಹುಂಡಿ ತರ ಡಬ್ಬಿ ಇಟ್ಟುಕೊಂಡಿದ್ದರು. ಯಾರು ದುಡ್ಡು ಹಾಕ್ತಾರೆ ಅವರಿಗೆ ಕೆಲಸ ಮಾಡಿಕೊಡುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು
ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ನಡೆಯುತ್ತಿದೆ. ಎಷ್ಟು ಆಗುತ್ತೆ ಅಷ್ಟು ಬಾಚೋಣ ಅಂತ ಅಧಿಕಾರಿಗಳು ಕುಳಿತಿದ್ದಾರೆ. ಈ ರಾಜ್ಯವನ್ನು ಯಾರೂ ಹೇಳೋರು, ಕೇಳೋರು ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಒಂದೇ ಸಾಕು. ಎರಡೂ ಸೇರಿ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿವೆ. ಕುಮಾರಣ್ಣ ಇಲ್ಲದಿದ್ದರೆ ಬಿಜೆಪಿಯಲ್ಲಿ ಶಂಖ ಊದಲು ಜನ ಸಿಕ್ಕುತ್ತಿರಲಿಲ್ಲ. ಕುಮಾರಣ್ಣನ ಶಂಖ ರಾಜ್ಯದಲ್ಲಿ ಊದುತ್ತಿರುವುದು. ಕುಮಾರಣ್ಣ-ಕಾಂಗ್ರೆಸ್ ಮಾಡಿದ್ದರಿಂದ ಬಿಜೆಪಿಯವರು ಶಂಖ ಊದುತ್ತಿದ್ದಾರೆ. ದೇವಸ್ಥಾನದಲ್ಲಿ ಶಂಖ ಊದಿದರೆ ಹುಂಡಿಗೆ ಕಾಸು ಹಾಕುತ್ತಾರೆ. ಅದೇ ರೀತಿ ಬಿಜೆಪಿಯವರು ಒಂದು ಹುಂಡಿ ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮನೇ ಬಿದ್ದು ಹೋಗಿ ಬೀದಿಯಲ್ಲಿ ಮಲಗುತ್ತಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ರಸ್ತೆಯಲ್ಲಿ ಬಿದ್ದಿರುವ ಒಂದೇ ಒಂದು ಗುಂಡಿ ಮುಚ್ಚಿಲ್ಲ. ಸರ್ಕಾರವನ್ನು ಒತ್ತಾಯಿಸುತ್ತೇನೆ. ಬೆಳೆ ನಷ್ಟಕ್ಕೆ ರೈತರು ಖರ್ಚು ಮಾಡಿರುವ ಹಣವನ್ನಾದರೂ ಕೊಡಿ. ರಾಜ್ಯದಲ್ಲಿ, ಪಶುಪಾಲನಾ ಇಲಾಖೆ, ಕೃಷಿ ಇಲಾಖೆ ತೋಟಗಾರಿಕೆ ಸತ್ತು ಹೋಗಿದೆ. ಬೆಳಗ್ಗೆ ಎದ್ದರೆ ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು, ಈಗ ಶಾಲು ಎಲ್ಲಿಟ್ಟಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಸೂಟ್ ಕೇಸ್ ನಲ್ಲಿ ಶಾಲು ಇಟ್ಟಿರಬೇಕು. 2023ಕ್ಕೆ ಶಾಲು ತೆಗೆಯುತ್ತಾರಾ ನೋಡಬೇಕು. ಯಡಿಯೂರಪ್ಪ ಮಾಡಿರುವ ಘನಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಪ್ರಧಾನಮಂತ್ರಿಗಳೇ ಇತ್ತ ಕಣ್ಣು ಬಿಡಿ. ಕೇಂದ್ರ ಸರ್ಕಾರದದಿಂದ ಒಂದು ತಂಡ ಕಳಿಸಬೇಕು. ಇಡೀ ರಾಜ್ಯವನ್ನು ವೀಕ್ಷಣೆ ಮಾಡಲಿ. ಮಂತ್ರಿಗಳ ಊರಲ್ಲೇ ಜನ ಬೀದಿಗೆ ಬಿದ್ದಿದ್ದಾರೆ. ಜನ ಉಗಿದ ಮೇಲೆ ಸಿಎಂ ವಿಸಿಟ್ ಮಾಡಿದ್ದಾರೆ ಎಂದು ರೇವಣ್ಣ ಗರಂ ಆದರು. ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣ- ಇಂಜಿನಿಯರ್ ಅರೆಸ್ಟ್