– ಎಲ್ಲಿಯ ಬಳ್ಳಾರಿ, ಇನ್ನೆಲ್ಲಿಯ ಬೆನಕಟ್ಟಿ?
– ದೇವಾಲಯಕ್ಕೆ 9 ಕಿ.ಮೀ ಪಾದಯಾತ್ರೆ
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹರಕೆ ಈಡೇರಿಸಲು ಪಾದಯಾತ್ರೆ ಕೈಗೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿ ರೆಡ್ಡಿ ಪಾದಯಾತ್ರೆ ಕೈಗೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜನಾರ್ದನ ರೆಡ್ಡಿ ಬಾಗಲಕೋಟೆ ತಾಲೂಕಿನ ಕೂಡಲಸಂಗಮ ಕ್ರಾಸ್ ನಿಂದ ಬೆನಕಟ್ಟಿಯವರೆಗೂ ಪಾದಯಾತ್ರೆ ಮಾಡಲಿದ್ದು, ಬೆನಕಟ್ಟಿಯಲ್ಲಿ ವೇಮನ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ರೆಡ್ಡಿಯ ಪಾದಯಾತ್ರೆ ಹಿಂದಿನ ಮರ್ಮ ನಿಗೂಢವಾಗಿದೆ.
Advertisement
Advertisement
ಜನಾರ್ದನ ರೆಡ್ಡಿ ಅವರು ಪಾದಯಾತ್ರೆ ಮೂಲಕ ದೇವಾಲಯಕ್ಕೆ ಬರುವುದಾಗಿ ಹರಕೆ ಹೊತ್ತಿದ್ದರಂತೆ. ಹೀಗಾಗಿ ಇಂದು ಮಧ್ಯಾಹ್ನ 2.30 ಗಂಟೆಗೆ ಪಾದಯಾತ್ರೆ ನಡೆಸಲಿದ್ದಾರೆ. ಸುಮಾರು 9 ಕಿ.ಮೀ. ಪಾದಯಾತ್ರೆ ನಡೆಸಲಿದ್ದು, ಸಂಜೆ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನು ಯಾಕೆ ಈ ಪಾದಯಾತ್ರೆಯನ್ನು ಕೈಗೊಳ್ಳುತ್ತೇನೆ ಎನ್ನುವುದಕ್ಕೆ ರೆಡ್ಡಿ ಅವರೇ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ನಾಡಿನ ಸಮಸ್ಥ ಜನತೆಗೆ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನರ 607 ನೆಯ ಜಯಂತಿಯ ಹಾರ್ದಿಕ ಶುಭಾಶಯಗಳು. ಮುಂಬರುವ ದಿನಗಳಲ್ಲಿ ನಾಡಿನ ಎಲ್ಲೆಡೆ ಸುಖ ಶಾಂತಿ ಸಮೃದ್ಧಿ ನೆಲೆಸಲಿ ಎಲ್ಲರ ಬಾಳು ಬಂಗಾರವಾಗಲಿ ಎಂದು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.
Advertisement
ಆತ್ಮೀಯರೇ, ದಿನಾಂಕ 19 ರಂದು ಐತಿಹಾಸಿಕ ಜಿಲ್ಲೆ ಬಾಗಲಕೋಟೆಗೆ ತೆರಳುತ್ತಿದ್ದೇನೆ. ಅಲ್ಲಿ ಶ್ರೀ ವೇಮನರ ಜಯಂತಿಯ ಅಂಗವಾಗಿ ಬಾಗಲಕೋಟೆ ನಗರದ ಸಂಗಮ್ ಸರ್ಕಲ್ ಬಳಿ ನಡೆಯಲಿರುವ ಐತಿಹಾಸಿಕ ರೆಡ್ಡಿ ಸಮಾಜ ಬಾಂಧವರ ಸಮಾವೇಶದಲ್ಲಿ ಭಾಗವಹಿಸುತ್ತಿದ್ದೇನೆ. ನಂತರ 9 ಕಿಲೋಮೀಟರ್ ಪಾದಯಾತ್ರೆಯಲ್ಲಿ ತೆರಳಿ, ಬೆನಕಟ್ಟಿ ಗ್ರಾಮದಲ್ಲಿ ಸಂಜೆ ನಡೆಯಲಿರುವ ಶ್ರೀ ವೇಮನರ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಆ ಭಾಗದ ನನ್ನ ಸಮಾಜ ಬಾಂಧವರು ಪ್ರೀತಿಯಿಂದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಎಲ್ಲ ಸಮಾಜದ ಬಾಂಧವರಿಗೆ ಚಿರಋಣಿಯಾಗಿದ್ದೇನೆ.
ಸಮಾವೇಶ, ಪಾದಯಾತ್ರೆ, ರಥೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜದ ಬಾಂಧವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ. ಹೇಮ – ವೇಮನರ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತಾ, ಎಲ್ಲರಿಗೂ ಮತ್ತೊಮ್ಮೆ ಶ್ರೀ ವೇಮನರ ಜಯಂತಿಯ ಶುಭಾಶಯಗಳು ಎಂದು ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv