ಮಂಗಳೂರು: ಕಲ್ಲಡ್ಕ ಶಾಲೆಗೆ ಅನ್ನದಾನದ ಅನುದಾನ ಕಡಿತದ ಹಿನ್ನೆಲೆಯಲ್ಲಿ ಶಾಲೆಯ ಹಿತೈಷಿಗಳ ಭಿಕ್ಷಾಂದೇಹಿ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಾಥ್ ನೀಡಿದ್ದಾರೆ.
ಹೌದು. ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ 25 ಲಕ್ಷ ರೂಪಾಯಿ ಚೆಕ್ ಅನ್ನು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹಸ್ತಾಂತರಿಸಿದ್ದಾರೆ.
Advertisement
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗಾಗಿ ಭಿಕ್ಷಾಂದೇಹಿ ಆಂದೋಲನ- 2 ದಿನದಲ್ಲಿ ಹರಿದುಬಂದ ಹಣವೆಷ್ಟು ಗೊತ್ತಾ?
Advertisement
ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಈ ಆನ್ ಲೈನ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಲ್ಲಡ್ಕದ ಎರಡು ಶಾಲೆಗಳಿಗೆ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿ ಸರಕಾರ ಆದೇಶಿಸುತ್ತಿದ್ದಂತೆ ಶಾಲೆಯ ಸಂಚಾಲಕ, ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಿಕ್ಷೆ ಎತ್ತಿಯಾದರೂ ಶಾಲೆಯನ್ನು ನಡಿಸ್ತೀನಿ ಅನ್ನೋ ಮಾತು ಹೇಳಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ಮಹೇಶ್ ಮತ್ತು ಅವರ ತಂಡ ಸಾಮಾಜಿಕ ಜಾಲತಾಣದ ಮೂಲಕ `ಭಿಕ್ಷಾಂದೇಹಿ’ ಆನ್ ಲೈನ್ ಅಭಿಯಾನ ಆರಂಭಿಸಿತ್ತು. ಇದೀಗ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ದೇಣಿಗೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಕಲ್ಲಡ್ಕ ಶಾಲೆಗೆ ಆಗಮಿಸಿದ ಜನಾರ್ದನ ರೆಡ್ಡಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೂಲಕ 25 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಈಗಾಗಲೇ ಹಲವು ರಾಜಕೀಯ, ಸಾಮಾಜಿಕ ಮುಖಂಡರು ದೇಣಿಗೆ ನೀಡಿ ಶಾಲೆಗೆ ನೈತಿಕ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಅನುದಾನ ಕಟ್- ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಮಕ್ಕಳ ಧಿಕ್ಕಾರ
ಇದನ್ನೂ ಓದಿ: ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ