ಕಲಬುರಗಿ: ನನ್ನ ಮುಖ, ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಣಿ ಮಿಣಿಯ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯ ಮಾಜಿ ಮುಖ್ಯಮಂತ್ರಿ. ನಮ್ಮ ಪಕ್ಕದ ಕ್ಷೇತ್ರದವರು. ಅವರ ಕೈ ಕೆಳಗೆ ಕೆಲಸ ಮಾಡಿರೋರು. ಬಿಜೆಪಿ ನಾಯಕರು ಕೆಲವು ಮಾತುಗಳನ್ನಾಡುತ್ತಿದ್ದಾರೆ. ಮಂತ್ರಿಗಳು, ಶಾಸಕರು ಮಾತನಾಡಿದ ಮಾತುಗಳನ್ನು ಹೇಳುತ್ತಿಲ್ಲ. ಕುಮಾರಸ್ವಾಮಿ ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುವುದು ಸರಿಯಲ್ಲ, ಎಂದು ಬಿಜೆಪಿಯವರಿಗೆ ಹೆಚ್‍ಡಿಕೆ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ
Advertisement
Advertisement
ದೇಶಕ್ಕೆ ಸಮಾಜಕ್ಕೆ ಅನುದಾನ, ಅಭಿವೃದ್ಧಿ, ಯುವಕರು, ದ್ವೇಷ ಸಾಧನೆ, ಕೇಸು ಇವುಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಮಿಣಿ ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ನನ್ನ ಮುಖನೂ ಮಿಣಿ ಮಿಣಿ ಅಂತಿದೆಪ್ಪಾ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯನಾ ಎಂದು ಮರು ಪ್ರಶ್ನೆ ಹಾಕುವ ಮೂಲಕ ಹೆಚ್‍ಡಿಕೆ ಹೇಳಿಕೆಯನ್ನು ಡಿಕೆಶಿ ಬೆಂಬಲಿಸಿದರು. ಇದನ್ನೂ ಓದಿ: ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ
Advertisement
ಕೆಪಿಸಿಸಿ ಅಧ್ಯಕ್ಷ ಆಯ್ಕೆಗೇ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ ಗುಂಡೂರಾವ್ ಅವರು ನಮ್ಮ ನಾಯಕರು ಅವರೇ ಅಧ್ಯಕ್ಷರಾಗಿದ್ದಾರೆ. ಅವರು ರಾಜೀನಾಮೆ ನೀಡಿದರೂ ಅದನ್ನ ಪಕ್ಷದ ವರಿಷ್ಠರು ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಸಹ ಖಾಲಿ ಇಲ್ಲ. ಇನ್ನು ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೇ ಅಡ್ಡಗಾಲು ಹಾಕಲು ಸಾಧ್ಯ ಅಂತ ತಮ್ಮ ಎದುರಾಳಿ ಗುಂಪಿಗೆ ಡಿಕೆಶಿ ಟಾಂಗ್ ನೀಡಿದರು. ಇದನ್ನೂ ಓದಿ: ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್