– ಸರ್ಕಾರದ ವಿರುದ್ಧ ವರ್ಗಾವಣೆ ರೇಟ್ ಕಾರ್ಡ್ ಫಿಕ್ಸ್ ಆರೋಪ ; ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಬೆಂಗಳೂರು: ಮುಡಾ, ವಾಲ್ಮೀಕಿ ನಿಗಮದ ಅಕ್ರಮಗಳ ಬೆನ್ನಲ್ಲೇ ಈಗ ದೋಸ್ತಿಗಳು ಸರ್ಕಾರದ ವಿರುದ್ಧ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪರಿಷತ್‌ನ ಬಿಜೆಪಿ, ಜೆಡಿಎಸ್ ಸದಸ್ಯರು ಸರ್ಕಾರದ ರೇಟ್ ಕಾರ್ಡ್ ವಿರುದ್ಧ ಧರಣಿ ನಡೆಸಿದರು.
Advertisement
ಈ ವೇಳೆ ಯಾವ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳಿಗೆ ಎಷ್ಟೆಷ್ಟು ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎನ್ನುವ ಪೋಸ್ಟರ್‌ಗಳನ್ನ ಪ್ರದರ್ಶಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಮೊಳಗಿಸಿದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ – ರಾಜ್ಯದ 30 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
Advertisement
Advertisement
ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ ಅವರದ್ದು ಪಾರದರ್ಶಕ ಭ್ರಷ್ಟ ಸರ್ಕಾರ. ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ಈ ರೇಟ್ ಕಾರ್ಡ್ ಫಿಕ್ಸ್ ಸತ್ಯ ಎಂದು ಆರೋಪಿಸಿದರು.
Advertisement
ನಗರಾಭಿವೃದ್ಧಿ ಇಲಾಖೆಯಲ್ಲಿ ಚದರಡಿಗೆ 100 ರೂ. ಕೊಡಬೇಕು. ಭೂ ಪರಿವರ್ತನೆಗೆ ಎಕರೆಗೆ 27 ಲಕ್ಷ ರೂ. ಫಿಕ್ಸ್. ಪೊಲೀಸ್ ಇನ್‌ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ ರೂ., ಎಇ 50 ಲಕ್ಷದಿಂದ 75 ಲಕ್ಷ. ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ ರೂ. ಬೆಂಗಳೂರು ಎಸಿ 5 ಕೋಟಿ ರೂ. ಎಸಿಪಿ 1.5 ಕೋಟಿಯಿಂದ 2 ಕೋಟಿ. ಎಇ 20-25 ಲಕ್ಷ, ಎಸಿ (ಬೆಂಗಳೂರು) 5-7 ಕೋಟಿ, ಡಿಸಿ 1-1.5 ಕೋಟಿ ರೂ. ಕೊಡಬೇಕು ಸಬ್ ರಿಜಿಸ್ಟ್ರಾರ್ ಹರಾಜು ಹೋಲ್‌ಸೇಲ್ ಬಿಡ್ ನಡೆಸಲಾಗ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲೂ ಮಳೆಯಬ್ಬರ; ಶಿರಾಡಿಘಾಟ್‌ನಲ್ಲಿ ಸರಣಿ ಭೂಕುಸಿತ – ಬೆಂಗಳೂರು, ಮಂಗಳೂರು ಸಂಚಾರ ಬಂದ್
ರೇಟ್ ಕಾರ್ಡ್ ಸತ್ಯ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಇವರ ಭ್ರಷ್ಟಾಚಾರ ಬರಿಗಣ್ಣಿಗೆ ಕಾಣತ್ತೆ. ನಲವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅಂತಾರೆ ಸಿದ್ದರಾಮಯ್ಯ. ಇದನ್ನ ಯಾರೂ ಒಪ್ಪಲ್ಲ ಎಂದು ಟಾಂಗ್ ಕೊಟ್ಟರು.