ಬೀದರ್: ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ (Bheemanna Khandre) ಆರೋಗ್ಯದಲ್ಲಿ ಏರುಪೇರಾಗಿದ್ದು, ಕಳೆದ 15 ದಿನಗಳಿಂದ ಬೀದರ್‌ನ ಗುದಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
102 ವರ್ಷದ ಭೀಮಣ್ಣ ಖಂಡ್ರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಉಸಿರಾಟದ ಸಮಸ್ಯೆ ಮತ್ತು ಬಿಪಿಯಲ್ಲಿ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಬಂದು ತಂದೆಯ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಾಕೈ | ಅಮೆರಿಕ ಏರ್‌ಸ್ಟ್ರೈಕ್ – ಸಿರಿಯಾದಲ್ಲಿ 36 ಐಸಿಸ್ ಉಗ್ರರ ನೆಲೆಗಳು ಉಡೀಸ್
ವೈದ್ಯರು ಚಿಕಿತ್ಸೆ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ತಂದೆ ಭೀಮಣ್ಣ ಖಂಡ್ರೆಗೆ ಆರೋಗ್ಯದಲ್ಲಿ ಏನಾಗಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊಲ್ಲಾಪುರದ DySP ವೈಷ್ಣವಿ ಅವರಿದ್ದ ಕಾರು ಅಪಘಾತ – ತಾಯಿ, ಚಾಲಕ ಸ್ಥಳದಲ್ಲೇ ಸಾವು!

