– ಕೆಫೆ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ಬಗ್ಗೆ ಮಾಜಿ ಗೃಹ ಸಚಿವ ಪ್ರತಿಕ್ರಿಯೆ
– ಮುಸ್ಲಿಂ ಯುವಕನ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ ಹಿಂದೂ ಯುವಕರ ಹೆಸರಲ್ಲಿ ಫೇಕ್ ಐಡಿ ಕ್ರಿಯೇಟ್: ಆರಗ
ಶಿವಮೊಗ್ಗ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Blast) ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ.
Advertisement
ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರ ಸಂಬಂಧ ನಿನ್ನೆ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆಗೆ ಕರೆದೊಯ್ದಿತ್ತು. ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಸೇರಿದ್ದಾನೆ ಎಂಬ ರೀತಿ ಪ್ರಚಾರ ಆಗಿತ್ತು. ಈಗಾಗಲೇ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ನಲ್ಲಿ ಆರೋಪಿಗಳ ಶಾಲಾ, ಕಾಲೇಜು ಸ್ನೇಹಿತರ ವಿಚಾರಣೆ ನಡೆಸಲಾಗ್ತಿದೆ: ಎನ್‌ಐಎ
Advertisement
Advertisement
ಮತೀನ್ ಎಂಬ ಕ್ರಿಮಿ ಸಾಯಿ ಪ್ರಸಾದ್ ವಿಳಾಸ ಬಳಸಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದ. ಈ ಸತ್ಯಾಂಶ ಎನ್‌ಐಎಗೆ ಗೊತ್ತಾದ ಬಳಿಕ ಸಾಯಿ ಪ್ರಸಾದ್‌ನನ್ನು ವಾಪಸ್ ಕಳುಹಿಸಿದ್ದಾರೆ. ಸಾಯಿ ಪ್ರಸಾದ್ ಬೆಂಗಳೂರಿನಿಂದ ವಾಪಸ್ ಶಿವಮೊಗ್ಗಕ್ಕೆ ಬರುತ್ತಿದ್ದಾನೆ ಎಂದು ತಿಳಿಸಿದ್ದಾರೆ.
Advertisement
ಮುಸ್ಲಿಂ ಯುವಕನ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ 8 ಮಂದಿ ಹಿಂದೂ ಯುವಕರ ಹೆಸರಿನಲ್ಲಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದಾನೆ. ಎನ್‌ಐಎ ಉಳಿದ 8 ಮಂದಿಯನ್ನು ವಿಚಾರಣೆಗೆ ಕರೆಯಬಹುದು. ಕೆಲವು ಅಂಗಡಿಗಳಲ್ಲಿ ಸಿಮ್ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಎಷ್ಟು ದುರುಪಯೋಗ ಆಗ್ತಿದೆ ಅಂತಾ ಇದರಿಂದ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ
ಯಾವ ಬಿಜೆಪಿ ಕಾರ್ಯಕರ್ತ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಖಂಡಿತ ಭಾಗಿಯಾಗಲಾರ. ಸಾಮಾನ್ಯ ಕಾರ್ಯಕರ್ತನಾದ ಸಾಯಿ ಪ್ರಸಾದ್ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಸಾಯಿ ಪ್ರಸಾದ್ ಒಬ್ಬ ಪೈಂಟರ್, ವಿಚಾರಣೆಯಲ್ಲಿ ಸಹಕರಿಸಿ ಸತ್ಯಾಂಶ ಹೇಳಿದ್ದಾನೆ. ಅಪಾರ್ಥ ಕಲ್ಪಿಸುವ ಪ್ರಚಾರ ಬೇಡ ಎಂಬುದು ನನ್ನ ವಿನಂತಿ ಎಂದು ಮನವಿ ಮಾಡಿದ್ದಾರೆ.