ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾದ್ರೂ ರಾಜ್ಯ ಕಾಂಗ್ರೆಸ್ ನಾಯಕರ ಕೈಗೆ ಸಿಗದ ಮಾಜಿ ಸಚಿವ ಅಂಬರೀಶ್ ಈಗ ಹೊಸ ಬೇಡಿಕೆಯೊಂದಿಗೆ ನಾಯಕರಿಗೆ ತಲೆನೋವು ತಂದಿಟ್ಟಿದ್ದಾರೆ.
ಯಾರ ಸಂಪರ್ಕಕ್ಕೂ ಸಿಗದ ಅಂಬರೀಶ್ ರನ್ನ ಸಂಪರ್ಕಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭಾನುವಾರ ಸಂಜೆಯೊಳಗೆ ತಮ್ಮ ತೀರ್ಮಾನ ತಿಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಆ ನಂತರವೂ ಮೌನವಾಗಿದ್ದ ಅಂಬರೀಶ್, ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಯ ನಾಯಕತ್ವದ ಪ್ರಶ್ನೆ ಎತ್ತಿ, ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!
Advertisement
Advertisement
ಮಂಡ್ಯದ ನಾಲ್ಕು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ನಾನು ಹೇಳಿದಂತೆ ಆಗಬೇಕು ಅಂತ ಡಿಮ್ಯಾಂಡ್ ಮುಂದಿಟ್ಟಿದ್ದಾರೆ. ಮಂಡ್ಯ ನನ್ನ ಕ್ಷೇತ್ರ ಅದರ ಜೊತೆಗೆ ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್.ಪೇಟೆ ಹಾಗೂ ಮೇಲುಕೋಟೆಯ ಟಿಕೆಟ್ ಹಂಚಿಕೆ ಜವಾಬ್ದಾರಿ ನನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
Advertisement
ಸ್ಕ್ರಿನಿಂಗ್ ಕಮಿಟಿ ಸಭೆಗೆ ಒಂದು ದಿನವಷ್ಟೆ ಬಾಕಿ ಇದೆ. ಮಂಡ್ಯ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮಗೊಂಡಿದೆ. ಆದರೆ ಕೊನೆ ಗಳಿಗೆಯಲ್ಲಿ ಅಂಬರೀಶ್ ಹೊಸ ವರಸೆ ತೆಗೆದಿದ್ದಾರೆ. ಇದನ್ನೂ ಓದಿ: ಚುನಾವಣೆ ಹತ್ತಿರ ಬಂದ್ರೂ ಮಂಡ್ಯದಲ್ಲಿ ಅಂಬಿ, ರಮ್ಯಾ ನಾಪತ್ತೆ!
Advertisement
ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಸುರೇಶ ಹಾಗೂ ಮೇಲುಕೋಟೆಯಲ್ಲಿ ಎಲ್.ಡಿ.ರವಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪುತ್ತಾರೆ ಅಥವಾ ಮಂಡ್ಯದಲ್ಲೇ ಬೇರೆ ಅಭ್ಯರ್ಥಿ ಹಾಕಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ತಿರುಗೇಟು ನೀಡುತ್ತಾರಾ ಎಂಬುದೇ ಸದ್ಯದ ಕುತೂಹಲ ವಿಷಯವಾಗಿದೆ.