ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗಿದೆ.
Advertisement
ಮಂಡಳಿಯ ಅನ್ಯಾಯದಿಂದ ನೊಂದ ಸದಸ್ಯರು ಸ್ವಂತ ಒಂದು ಬೀಗ ತಂದು ವಾಣಿಜ್ಯ ಮಂಡಳಿಗೆ ಬೀಗ ಹಾಕಿದ್ದಾರೆ. ಒಂದು ಪಕ್ಷಕ್ಕೆ ಸೀಮಿತವಾಗಿರುವ ವಾಣಿಜ್ಯ ಮಂಡಳಿಯ ನಡೆಯನ್ನು ಖಂಡಿಸಿದ್ದಾರೆ.
Advertisement
ವಾಣಿಜ್ಯ ಮಂಡಳಿ ಸದಸ್ಯ ಶ್ರೀನಿವಾಸ್ ಮೇಕೆದಾಟು ಪಾದಯಾತ್ರೆ ಮತ್ತು ವಾಣಿಜ್ಯ ಮಂಡಳಿಯು ಒಂದು ಪಕ್ಷಕ್ಕೆ ಸೀಮಿತವಾಗಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಉಚ್ಛಾಟನೆ ಮಾಡಿದ್ದನ್ನು ಖಂಡಿಸಿ ಶ್ರೀನಿವಾಸ್, ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್
Advertisement
Advertisement
ಸದಸ್ಯತ್ವದಿಂದ ಉಚ್ಛಾಟನೆಗೊಂಡಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಕ್ರಮ ಅವ್ಯವಹಾರ ನಡೆಯುತ್ತಿದೆ. ಯಾವುದೋ ಒಬ್ಬ ವ್ಯಕ್ತಿಯ ಕಪಿಮುಷ್ಟಿಗೆ ಸಿಲುಕಿ ಸದಸ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ವಾಣಿಜ್ಯ ಮಂಡಳಿ ಕಲಾವಿದರ ಸಮಸ್ಯೆಗೆ ಸ್ಪಂದಿಸಬೇಕು. ಅದು ಬಿಟ್ಟು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗುವುದಲ್ಲ. ಇದನ್ನ ಪ್ರಶ್ನೆ ಮಾಡಿದ ಎಷ್ಟೋ ಸದಸ್ಯರನ್ನ ಉಚ್ಛಾಟನೆ ಮಾಡಿದ್ದಾರೆ. ಉಚ್ಛಾಟನೆ ಮಾಡೋದು ಎಷ್ಟು ಸರಿ? ದೊಡ್ಡ ಅವ್ಯವಹಾರ ನಡೆಯುತ್ತಾ ಇದೆ. ಅನ್ಯಾಯ ಆಗಿದೆ ನ್ಯಾಯ ಸಿಗಬೇಕು. ಹೀಗಾಗಿ ವಾಣಿಜ್ಯ ಮಂಡಳಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ
ಪ್ರತಿಭಟನೆ ವೇಳೆ ಹೈ ಗ್ರೌಂಡ್ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದೆ. ಹೈ ಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬೀಗ ತೆಗೆಯಿರೀ ಅಂತಾ ಹೇಳಿದ್ದು, ಪ್ರತಿಭಟನಕಾರರು ವಾಣಿಜ್ಯ ಮಂಡಳಿಗೆ ಹಾಕಿದ್ದ ಬೀಗ ತೆಗೆದಿದ್ದಾರೆ.