ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ರಂಗನಾಥ್ ಮಿಶ್ರಾ ಅವರು ಲಕ್ನೋದಲ್ಲಿ ಬಿಜೆಪಿ ಸೇರಿದ್ದಾರೆ.
ರಂಗನಾಥ್ ಮಿಶ್ರಾ ಅವರು ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರದಲ್ಲಿ 2007-2012ರ ಅವಧಿಯಲ್ಲಿ ಮಾಧ್ಯಮಿಕ ಶಿಕ್ಷಣ ಸಚಿವರಾಗಿದ್ದರು. ಸಮಾಜವಾದಿ ಪಕ್ಷದ ಮಾಜಿ ಶಾಸಕ ಮನೀಶ್ ರಾವತ್ ಅವರು ಕೂಡ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮತಾಂತರ ತಡೆಗೆ ಕಾನೂನು ಅಗತ್ಯ, ಅದು ದುರುಪಯೋಗವಾಗ್ಬಾರ್ದು: ಕೇಜ್ರಿವಾಲ್
ಸ್ವತಂತ್ರಾಬ್ಜೆಪಿ ಮತ್ತು ಸತ್ಯಕುಮಾರ್ ಅವರ ಉಪಸ್ಥಿತಿಯಲ್ಲಿ ಸಿಧೌಲಿಯ ಮಾಜಿ ಎಸ್‍ಪಿ ಶಾಸಕ, ಮನೀಶ್ ರಾವತ್, ಭದೋಹಿಯ ಬಿಎಸ್‍ಪಿ ಶಾಸಕ, ರಂಗನಾಥ್ ಮಿಶ್ರಾ ಮತ್ತು ಎಸ್‍ಪಿ ನಾಯಕ, ಡಾ. ಮನೋಜ್ ಕುಮಾರ್ ಪ್ರಜಾಪತಿ ಲಕ್ನೋದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್
Former SP MLA from Sidhauli, Manish Rawat, BSP MLA from Bhadohi, Rangnath Mishra &SP Leader, Dr Manoj Kumar Prajapati joined @BJP4UP in presence of @swatantrabjp Ji & @satyakumar_y Ji in Lucknow.
A warm welcome& extending wishes on a new beginning for a New UP.#यूपी_मांगे_भाजपा pic.twitter.com/OOMy67ypsW
— Shobha Karandlaje (@ShobhaBJP) January 29, 2022
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದ ಮೇಲೆ ನಂಬಿಕೆ ಇರುವುದರಿಂದ ಮನೀಶ್ ರಾವತ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು ಮತ್ತು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದರು.