ಬೆಂಗಳೂರು: ಕರ್ನಾಟಕ ಮೊದಲ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಎನ್. ವೆಂಕಟಾಚಲ(89) ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು ವೆಂಕಟಾಚಲ ಅವರು ವಿಧಿವಶರಾಗಿದ್ದಾರೆ. ವಯಾಲಿಕಾವಲ್ ಮನೆಯಲ್ಲಿ ವೆಂಕಟಾಚಲ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Advertisement
ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ಹಾಗೂ ಭ್ರಷ್ಟಾಚಾರ ರಹಿತ ಸಮಾಜಕ್ಕಾಗಿ ಅವರು ಶ್ರಮಿಸಿದರು.
ಅವರ ಕುಟುಂಬ ವರ್ಗ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. pic.twitter.com/xHivkit7Wa
— B.S.Yediyurappa (@BSYBJP) October 30, 2019
Advertisement
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ಮಿತ್ತೂರ್‍ನಲ್ಲಿ 1930, ಜುಲೈ 3 ರಂದು ವೆಂಕಟಾಚಲನವರು ಜನಿಸಿದರು. ನ್ಯಾ.ನಂಜೇಗೌಡ ವೆಂಕಟಾಚಲ ಅವರು ಬಿಎಸ್ಸಿ, ಬಿ ಎಲ್ ಪದವಿ ಪಡೆದಿದ್ದರು. 1955 ರಲ್ಲಿ ಕರ್ನಾಟಕ(ಮೈಸೂರು ರಾಜ್ಯ) ಹೈಕೋರ್ಟಿನ ವಕೀಲರಾಗಿದ್ದ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.
Advertisement
ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರ ನಿಧನದ ಸುದ್ದಿಕೇಳಿ ನೋವಾಯಿತು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು.
ಅವರ ಕುಟುಂಬಕ್ಕೆ ನನ್ನ ಸಂತಾಪಗಳು. pic.twitter.com/vPgwkcZ3fx
— Siddaramaiah (@siddaramaiah) October 30, 2019
Advertisement
1973 ರಿಂದ 1977ರವರೆಗೆ ಸರ್ಕಾರದಿಂದ ಕರ್ನಾಟಕ ಹೈಕೋರ್ಟಿನ ವಕೀಲರಾಗಿದ್ದ ವೆಂಕಟಾಚಲ ಅವರನ್ನು 1977 ರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯ್ತು. ಹಾಗೆಯೇ 2001ರಿಂದ 2006ರವರೆಗೆ ಅವರು ಲೋಕಾಯುಕ್ತರಾಗಿ ಸೇವೆ ಸಲ್ಲಿಸಿ, ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಹಾಗೂ ರಾಜ್ಯದ ಲೋಕಾಯುಕ್ತರಾಗಿ ನಿಷ್ಠೆಯಿಂದ ಕೆಲಸ ಮಾಡಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಶ್ರೀ ವೆಂಕಟಾಚಲಯ್ಯನವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ರಾಜ್ಯ ಹಾಗೂ ದೇಶ ಒಂದು ಹಿರಿಯ ಚೇತನವನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/EuljvMSmYp
— Dr. G Parameshwara (@DrParameshwara) October 30, 2019