ಕೋಲ್ಕತ್ತ: ಹೃದಯಾಘಾತದಿಂದಾಗಿ ಕೋಲ್ಕತಾದ ಆಸ್ಪತ್ರೆಯಲ್ಲಿ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿರವರು ಇಂದು ವಿಧಿವಶರಾಗಿದ್ದಾರೆ.
ಚಟರ್ಜಿ(89) ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಮಂಗಳವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, 12 ಸದಸ್ಯರ ವೈದ್ಯರ ತಂಡ ಅನುಭವಿ ರಾಜಕಾರಣಿಯನ್ನು ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ತಿಂಗಳು ಚಟರ್ಜಿರವರು ರಕ್ತಸ್ರಾವದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.
Advertisement
ರಾಗಾ ಸಂತಾಪ:
10 ಅವಧಿ ಸಂಸದರಾಗಿದ್ದು, ಮಾಜಿ ಸೋಮನಾಥ ಚಟರ್ಜಿರವರು ನಮ್ಮನ್ನು ಅಗಲಿರುವುದು ದುಖಃದ ಕ್ಷಣವಾಗಿದೆ. ಸೋಮನಾಥ್ ಚಟರ್ಜಿ ಸಂಸತ್ತಿನ ಎಲ್ಲ ಸದಸ್ಯರ ಗೌರವ ಮತ್ತು ಮೆಚ್ಚುಗೆಗೆ ಪಾತ್ರವಾದಂತ ಅಜಾತಶತೃ ನಾಯಕ. ಚಟರ್ಜಿ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
I mourn the passing away of Shri Somnath Chatterjee, 10 term MP and former Speaker of the Lok Sabha. He was an institution. Greatly respected and admired by all parliamentarians, across party lines. My condolences to his family at this time of grief. #SomnathChatterjee
— Rahul Gandhi (@RahulGandhi) August 13, 2018
Advertisement
ಚಟರ್ಜಿರವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 1968 ರಲ್ಲಿ ರಾಜಕೀಯ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಸದನದಲ್ಲಿ 2004 ರಿಂದ 2009 ರವರೆಗೆ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಯುಪಿಎ-ಐ ಸರ್ಕಾರಕ್ಕೆ ತನ್ನ ಪಕ್ಷದ ಬೆಂಬಲ ಹಿಂತೆಗೆದುಕೊಂಡ ಬಳಿಕ ಸ್ಪೀಕರ್ ಆಗಿ ರಾಜೀನಾಮೆ ನೀಡಲು ನಿರಾಕರಿಸಿದ್ದಕ್ಕೆ 2008ರಲ್ಲಿ ಚಟರ್ಜಿರವರನ್ನು ಸಿಪಿಐ(ಎಂ) ನಿಂದ ಹೊರಹಾಕಲಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
Former MP and Speaker Shri Somnath Chatterjee was a stalwart of Indian politics. He made our Parliamentary democracy richer and was a strong voice for the well-being of the poor and vulnerable. Anguished by his demise. My thoughts are with his family and supporters.
— Narendra Modi (@narendramodi) August 13, 2018
https://twitter.com/CMofKarnataka/status/1028874221483520001