ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) (Shanti Bhushan) ಮಂಗಳವಾರ ನಿಧನರಾಗಿದ್ದಾರೆ.
ಮಂಗಳವಾರ ಸಂಜೆ 7 ಗಂಟೆಗೆ ಅವರು ದೆಹಲಿಯಲ್ಲಿರುವ (NewDelhi) ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೊರಾರ್ಜಿ ದೇಸಾಯಿ (Morarji Desai) ನೇತೃತ್ವದ ಸರ್ಕಾರದಲ್ಲಿ ಶಾಂತಿ ಭೂಷಣ್ ಅವರು ಕಾನೂನು ಸಚಿವರಾಗಿ (Law Minister) 1977ರಿಂದ 1979ರ ವರೆಗೆ ಸೇವೆ ಸಲ್ಲಿಸಿದ್ದರು.
Advertisement
Former Law Minister and Senior Advocate Shanti Bhushan passes away.
(File pic) pic.twitter.com/UY2irnYAx5
— ANI (@ANI) January 31, 2023
Advertisement
1974ರಲ್ಲಿ ಶಾಂತಿ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ ನಾರಾಯಣ್ ಪರವಾಗಿ ವಾದಿಸಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು.
Advertisement
ರಾಜ್ ನಾರಾಯಣ್ ಅವರು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಭ್ರಷ್ಟ ಚುನಾವಣಾ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ಇಂದಿರಾ ಗಾಂಧಿಯವರ ಚುನಾವಣೆಯನ್ನೇ ಅನೂರ್ಜಿತಗೊಳಿಸಲು ಮನವಿ ಸಲ್ಲಿಸಿದರು. ಶಾಂತಿ ಭೂಷಣ್ ಪ್ರಕರಣದ ಪರ ವಕೀಲರಾಗಿದ್ದರು. ಇದನ್ನೂ ಓದಿ: 2013ರ ರೇಪ್‌ಕೇಸ್: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ
Advertisement
Shri Shanti Bhushan Ji will be remembered for his contribution to the legal field and passion towards speaking for the underprivileged. Pained by his passing away. Condolences to his family. Om Shanti.
— Narendra Modi (@narendramodi) January 31, 2023
ಶಾಂತಿ ಭೂಷಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಸಂತಾಪ ಸೂಚಿಸಿದ್ದಾರೆ. ಕಾನೂನು ಕ್ಷೇತ್ರಕ್ಕೆ ಶಾಂತಿ ಭೂಷಣ್ ಅವರ ಕೊಡುಗೆ ಹಾಗೂ ಸಮಾಜದಲ್ಲಿ ಹಿಂದುಳಿದವರ ಪರವಾಗಿ ದನಿ ಎತ್ತುತ್ತಿದ್ದುದು ಸ್ಮರಣೀಯವಾದುದು. ಅವರ ನಿಧನವು ತೀವ್ರ ನೋವು ತಂದಿದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ
ಶಾಂತಿ ಭೂಷಣ್ ಅವರ ಮಗ ಪ್ರಶಾಂತ್ ಭೂಷಣ್ (Prashant Bhushan) ಸಹ ಖ್ಯಾತ ವಕೀಲರಾಗಿದ್ದಾರೆ. ಶಾಂತಿ ಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರು 2012ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸ್ಥಾಪಕ ಸದಸ್ಯರಾಗಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k