ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕ ಉಮ್ಮನ್ ಚಾಂಡಿ (Oommen Chandy) ನಿಧನ ವಿಧಿವಶರಾಗಿದ್ದಾರೆ.
79 ವರ್ಷದ ಉಮ್ಮನ್ ಚಾಂಡಿಯವರು ಕೆಲವು ವರ್ಷಗಳಿಂದ ಕ್ಯಾನ್ಸರ್ (Cancer) ನಿಂದ ಬಳಲುತ್ತಿದ್ದರು. ಭಾನುವಾರವಷ್ಟೇ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 4.25ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement
"Former Kerala CM and senior Congress leader Oommen Chandy passes away", tweets Kerala Congress President K Sudhakaran pic.twitter.com/QAR7EfaUnI
— ANI (@ANI) July 18, 2023
Advertisement
ಉಮ್ಮನ್ ಚಾಂಡಿ 1969 ರಲ್ಲಿ ಯುವ ಕಾಂಗ್ರೆಸ್‍ನ (Congress) ರಾಜ್ಯಾಧ್ಯಕ್ಷರಾದರು. ಬಳಿಕ 1970 ರಲ್ಲಿ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿಯನ್ನು ಪ್ರತಿನಿಧಿಸಿ ಶಾಸಕರಾದರು. ಒಟ್ಟು 10 ಬಾರಿ ಶಾಸಕರಾಗಿದ್ದ ಉಮ್ಮನ್ ಚಾಂಡಿಯವರು ಜನಪರ ಆಡಳಿತದಿಂದ ಜನಮನ್ನಣೆ ಗಳಿಸಿದ್ದರು. 2004-06 ಮತ್ತು 2011-16ರ ಅವಧಿಯಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ – ಚಂದ್ರಯಾನ-3ರ ಬಿಡಿಭಾಗ?
Advertisement
Advertisement
ಸದ್ಯ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸುತ್ತಿದ್ದು, ಇತ್ತ ಅಗಲಿದ ಹಿರಿಯ ನಾಯಕನ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
Web Stories