ಬಾಗಲಕೋಟೆ: ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತು ನಾಪತ್ತೆಯಾಗಿದ್ದ ಸಂತ್ರಸ್ತೆ ದಿಢೀರ್ ಪ್ರತ್ಯಕ್ಷ ವಾಗಿದ್ದಾರೆ.
26 ನವೆಂಬರ್ 2016 ರಿಂದ ಇಂದಿನ ವರೆಗೆ ಕೆಲಸಕ್ಕೆ ಅನಧಿಕೃತ ಗೈರಾಗಿದ್ದ ಸಂತ್ರಸ್ತೆ, ಇಂದು ದಿಢೀರ್ ಆಗಮಿಸಿ, ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಗುಗ್ಗರಿಗೆ ಅರ್ಜಿ ಸಲ್ಲಿಸಿದ್ದಾರೆ.
- Advertisement 2-
- Advertisement 3-
ಇತ್ತ ಸಂತ್ರಸ್ಥೆ ಎಂಟು ತಿಂಗಳು ಅನಧಿಕೃತ ಗೈರಾದರೂ ಕ್ರಮ ಕೈಗೊಳ್ಳದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಅವರು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದು ಬಂದರೆ ಕೆಲಸಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
- Advertisement 4-
ಅನಾರೋಗ್ಯ ಮತ್ತು ಕೌಟುಂಬಿಕ ಕಾರಣಗಳಿಂದಾಗಿ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ನಡೆದ ಘಟನೆ ಎಲ್ಲ ಮುಗಿದು ಹೋದ ಕಥೆ, ಈಗಾಗಲೇ ನಾನು ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಅದನ್ನು ಪುನಃ ನೆನಪಿಸೋದು ಬೇಡ. ಸದ್ಯ ಪುನಃ ಕೆಲಸಕ್ಕೆ ಹಾಜರಾಗಲು ಬಂದಿದ್ದೇನೆ. ಮುಂದೆ ಏನಾದರೂ ತೊಂದರೆಯಾದರೆ ನನ್ನ ಸಹಾಯಕ್ಕೆ ಬನ್ನಿ ಎಂದು ಮಾಧ್ಯಮಗಳಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಸಿಐಡಿ ಅಧಿಕಾರಿಗಳು ಕ್ಲೀನ್ ಚಿಟ್ ನೀಡಿದ್ದರು. ಪ್ರಕರಣದ ಸಂತ್ರಸ್ತೆ ದೂರು ನೀಡರಲಿಲ್ಲ. ತನಿಖೆಯ ವೇಳೆ ನನ್ನ ಮತ್ತು ಮೇಟಿ ಅವರದ್ದು ತಂದೆ-ಮಗಳ ಸಂಬಂಧ, ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎನ್ನುವ ಅಂಶ ವರದಿಯಲ್ಲಿದೆ.