ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumarawamy) ಆರೋಗ್ಯ (Health) ಮತ್ತಷ್ಟು ಚೇತರಿಕೆ ಕಂಡಿದೆ. ಇಂದು ಅಥವಾ ನಾಳೆ ಹೆಚ್‍ಡಿಕೆ ಆಸ್ಪತ್ರೆಯಿಂದ ಮನೆಗೆ ತೆರಳುವ ಸಾಧ್ಯತೆ ಇದ್ದು, ಶುಕ್ರವಾರ ಬೇರೆ ಬೇರೆ ಪಕ್ಷದ ಅನೇಕ ರಾಜಕೀಯ ಮುಖಂಡರು ಆಸ್ಪತೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ.
Advertisement
ಕಳೆದ ಬುಧವಾರ ಬೆಳಗ್ಗಿನ ಜಾವ ಸುಸ್ತು ಮತ್ತು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದೆ. ಕಳೆದರೆಡು ದಿನದಿಂದ ತೀವ್ರ ನಿಗಾಘಟಕದಲ್ಲಿದ್ದ ಹೆಚ್‍ಡಿಕೆಯನ್ನ ಗುರುವಾರ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ವಾರ್ಡ್‍ನಲ್ಲಿನ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಇನ್ನಷ್ಟು ಸುಧಾರಣೆ ಕಂಡಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹ – ಪ್ರಜ್ವಲ್ ರೇವಣ್ಣ ಮೇಲಿನ ಆರೋಪಗಳೇನು?
Advertisement
Advertisement
ಹಲವು ರಾಜಕೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಹೆಚ್‍ಡಿಕೆ ಅವರ ಆರೋಗ್ಯ ವಿಚಾರಿಸಿದ್ರು. ಸದ್ಯ ವಾರ್ಡ್‍ನಲ್ಲಿ ಆರೋಗ್ಯವಾಗಿ ಹೆಚ್‍ಡಿಕೆ ಲವಲವಿಕೆಯಿಂದಿದ್ದು, ಎಂದಿನಂತೆ ದೈನಂದಿನ ಕಾರ್ಯಗಳನ್ನ ಮಾಡ್ತಾ ಇದ್ದಾರೆ. ಇಂದು ಸಂಜೆ ಅಥವಾ ನಾಳೆ ಮಧ್ಯಾಹ್ನಾದ ಒಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
Advertisement
ಸದ್ಯ ಹೆಚ್‍ಡಿಕೆ ಆರೋಗ್ಯ ಇನ್ನಷ್ಟು ಸುಧಾರಣೆ ಕಂಡಿದೆ. ಯಾವುದೇ ಸಮಸ್ಯೆ ಇಲ್ಲ. ಆತಂಕ ಬೇಡ ಅಂತ ವೈದ್ಯ ಮೂಲಗಳು ತಿಳಿಸಿವೆ.
Web Stories