– ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಭರತ್ ಪರ ಒಲವು
– ಅಮೆರಿಕದಲ್ಲಿ ಎಂಜಿನಿಯರ್, ಸಿಂಗಾಪುರದಲ್ಲಿ ಎಂಬಿಎ ಪದವಿ
ಬೆಂಗಳೂರು/ಹಾವೇರಿ: ಶಿಗ್ಗಾವಿ ಕ್ಷೇತ್ರದಲ್ಲಿ (Shiggaon Bypolls) ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಪುತ್ರ ಭರತ್ ಬೊಮ್ಮಾಯಿ (Bharat Bommai) ಅವರಿಗೆ ಬಿಜೆಪಿ ನಾಯಕರು ಟಿಕೆಟ್ ನೀಡಿದೆ.
ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಹಾಗೂ ಸರ್ವೆ ವರದಿಗಳಲ್ಲಿ ಭರತ್ ಪರ ಒಲವು ವ್ಯಕ್ತವಾಗಿತ್ತು. ರಾಜ್ಯ ನಾಯಕರಿಂದಲೂ, ಕೋರ್ ಕಮಿಟಿ ಪಟ್ಟಿಯಲ್ಲೂ ಭರತ್ ಮೊದಲ ಆದ್ಯತೆಯಾಗಿತ್ತು.
Advertisement
ಕಾಂಗ್ರೆಸ್ ಸರ್ಕಾರ ಇರುವ ಕಾರಣ, ಬೇರೆಯವರಿಗೆ ಟಿಕೆಟ್ ನೀಡಿದರೆ ಸೋಲಿನ ಆತಂಕ ಇತ್ತು.ಈಗ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ಬಸವರಾಜ ಬೊಮ್ಮಾಯಿಗೆ ಕ್ಷೇತ್ರ ಉಳಿಸಿಕೊಳ್ಳಲು ಹೈಕಮಾಂಡ್ ಟಾಸ್ಕ್ ನೀಡಿದೆ. ಇದನ್ನೂ ಓದಿ: ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್
Advertisement
Advertisement
ಸತತವಾಗಿ 4 ಬಾರಿ ಶಿಗ್ಗಾವಿ ಕ್ಷೇತ್ರದಿಂದ ಗೆದ್ದ ಕಾರಣ ಬೊಮ್ಮಾಯಿ ಅವರು ಈ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿದ್ದಾರೆ. ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರೂ ಭರತ್ ಬೊಮ್ಮಾಯಿ ಸ್ಪರ್ಧೆಗೆ ಸಂಪೂರ್ಣ ಸಾಥ್ ನೀಡುವ ಭರವಸೆ ನೀಡಿದ್ದರು.
Advertisement
ಮಾಜಿ ಸಚಿವ ಮುರುಗೇಶ್ ನಿರಾಣಿ ಶಿಗ್ಗಾವಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರದೆ ಹಿಂದೆ ಸರಿದಿದ್ದರಿಂದ ಭರತ್ ಟಿಕೆಟ್ ಹಾದಿ ಸುಲಭ ಆಯಿತು. ಲಿಂಗಾಯತರ ಪ್ರಾಬಲ್ಯ ಇರುವ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೇ ಇರಲಿಲ್ಲ. ಭರತ್ ಬೊಮ್ಮಾಯಿ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಪುತ್ರನಿಗೆ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ
2023ರ ವಿಧಾನಸಭಾ ಚುನಾವಣೆಯಲ್ಲಿ ತಂದೆ ಬಸವರಾಜ ಬೊಮ್ಮಾಯಿ ಪರ ಶಿಗ್ಗಾವಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಇವರು 2024 ಲೋಕಸಭಾ ಚುನಾವಣೆ ತಂದೆಯ ಪರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಓಡಾಡಿದ್ದರು.
ಮಾರ್ಚ್ 31, 1989 ರಂದು ಜನಿಸಿದ ಭರತ್ 2011ರಲ್ಲಿ ಅಮೆರಿಕದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಸಿಂಗಪುರದ ಮ್ಯಾನೇಜ್ಮೆಂಟ್ ಯುನಿವರ್ಸಿಟಿಯಿಂದ 2014 ರಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಎಂಬಿಎ ಪದವಿ ಬಳಿಕ ಕೆಲ ದಿನಗಳ ಕಾಲ ವಿದೇಶದಲ್ಲೇ ಇದ್ದು ನಂತರ ಭಾರತಕ್ಕೆ ಬಂದು ಭರತ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.