ನವದೆಹಲಿ: ಬಿಜೆಪಿ ಸೇರಬಹುದು ಎನ್ನಲಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ (Champai Soren) ತಮ್ಮದೇ ರಾಜಕೀಯ ಪಕ್ಷವನ್ನು (New Political Party) ಅರಂಭಿಸುವ ಸುಳಿವು ನೀಡಿದ್ದು, ಒಂದು ವಾರದೊಳಗೆ ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವುದು, ಹೊಸ ಪಕ್ಷವನ್ನು ಆರಂಭಿಸುವುದು ಅಥವಾ ಇನ್ನೊಂದು ಪಕ್ಷವನ್ನು ಸೇರುವುದು ನನ್ನ ಮುಂದಿರುವ ಆಯ್ಕೆಗಳು, ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಹೀಗಾಗೀ ನನ್ನ ಮುಂದೆ ಇನ್ನೆರಡು ಆಯ್ಕೆಗಳಿದೆ. ನಾನೇಕೆ ನನ್ನ ಸ್ವಂತ ಪಕ್ಷವನ್ನು ರಚಿಸಬಾರದು? ನನ್ನ ಮುಂದಿನ ನಡೆ ಒಂದು ವಾರದಲ್ಲಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರೈಲಿನಲ್ಲಿ ಉಕ್ರೇನಿಗೆ ಮೋದಿ ಭೇಟಿ – ಐಷಾರಾಮಿ ರೈಲಿನ ವಿಶೇಷತೆ ಏನು?
Advertisement
Advertisement
ಆಗಸ್ಟ್ 18 ರಂದು ಅವರು ಕೆಲವು ಶಾಸಕರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನಲೆ ಅವರು ಬಿಜೆಪಿ ಸೇರ್ಪಡೆಯಾಗಬಹುದು ಎಂದು ಊಹಿಸಲಾಗಿತ್ತು. ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜನವರಿ 31 ರಂದು ಇಡಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ನಂತರ 67 ವರ್ಷದ ಚಂಪೈ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾದರು. ಇದನ್ನೂ ಓದಿ: ಊರ್ವಶಿ ರೌಟೇಲಾ ಬೆರಳಿಗೆ ಗಾಯ- ಕಾಮೆಂಟ್ ಮಾಡಿ ನಗ್ತಿರೋದ್ಯಾಕೆ ನೆಟ್ಟಿಗರು?
Advertisement
ಹೇಮಂತ್ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜುಲೈ 3 ರಂದು ಅವರು ಹುದ್ದೆಯಿಂದ ಕೆಳಗಿಳಿದರು. ರಾಜೀನಾಮೆ ಬಳಿಕ ಮಾತನಾಡಿದ್ದ ಅವರು ನನಗೆ ಮನಸ್ಸು ಒಡೆದು ಹೋಗಿತ್ತು. ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಿದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ನನ್ನ ಆತ್ಮಗೌರವಕ್ಕೆ ದಕ್ಕೆಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಯ್ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್, ಇಂಗ್ಲೆಂಡ್ ಬೆಂಬಲ