ಬೆಂಗಳೂರು: ಅಪ್ಪ ಸಮಾಜದ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರೆ, ಮಗ ಮಾತ್ರ ಹೆಣ್ಣು ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದ. ಆದರೆ ಈಗ ಮಂಗಳೂರು ಮೂಲದ ಯುವತಿ ನೀಡಿದ ದೂರಿನಿಂದಾಗಿ ಕಾಮುಕ ಅರೆಸ್ಟ್ ಆಗಿದ್ದಾನೆ.
ಕೆಲ ದಿನಗಳ ಹಿಂದೆ ಉದ್ಯೋಗಕ್ಕಾಗಿ ಆರಸಿ ಬಂದಿದ್ದ ಯುವತಿಯೊಬ್ಬರು ಎಚ್ ಆರ್ ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರನ್ನು ಮೈ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಹಬೀಬ್ ಗಣಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಜಮ್ಮು ಕಾಶ್ಮೀರದ ಮಾಜಿ ಸಮಾಜ ಕಲ್ಯಾಣ ಸಚಿವ ಅಬ್ದುಲ್ ಗಣಿ ಮಲ್ಲಿಕ್ ಪುತ್ರ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ 300ಕ್ಕೂ ಹೆಚ್ಚು ಯುವತಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿರುವ ಮಾಹಿತಿಯೂ ಸಿಕ್ಕಿದೆ.
Advertisement
ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ:
ವಾಣಿಜ್ಯ ಪದವೀಧರನಾಗಿರುವ ಹಬೀಬ್ ಗನಿ ಉದ್ಯೋಗವನ್ನು ಅರಸಿ ನಗರಕ್ಕೆ ಬಂದಿದ್ದ. ಕಾಲ್‍ಸೆಂಟರ್‍ನಲ್ಲಿ ಕೆಲಸಕ್ಕೆ ಸೇರಿ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದ. ಖಾಸಗಿ ಕಂಪೆನಿಗಳ ಸಂದರ್ಶನಕ್ಕೆ ಹೋಗುತ್ತಿದ್ದ ಆರೋಪಿಯು ಸ್ವಾಗತಕಾರರ ಕೊಠಡಿಯಲ್ಲಿರುತ್ತಿದ್ದ ಸಂದರ್ಶಕರ ಪುಸ್ತಕದಲ್ಲಿದ್ದ ವಿವರಗಳನ್ನು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ.
Advertisement
ಬಳಿಕ ಈ ನಂಬರ್ ಗಳಿಗೆ ತನ್ನ ಮೊಬೈಲ್ ನಿಂದ, ನಾನು ಮಾನವ ಸಂಪನ್ಮೂಲ ಅಧಿಕಾರಿ ಎಂದು ಪರಿಚಯಿಸಿ, ನಿಮಗೆ ಉದ್ಯೋಗ ಸಿಕ್ಕಿದೆ ಎಂದು ಯುವತಿಯರಿಗೆ ಕರೆ ಮಾಡುತ್ತಿದ್ದ. ಇದಾದ ಬಳಿಕ ಸಂದರ್ಶನ ಬರುವಂತೆ ಹೇಳಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಉತ್ತರ ಪ್ರದೇಶದ ವಿಳಾಸ ನೀಡಿ ಹಬೀಬ್ ಸಿಮ್ ಕಾರ್ಡ್ ಖರೀದಿಸಿದ್ದು, ಈ ಸಿಮ್ ಮೂಲಕ ತನ್ನ ಕೃತ್ಯವನ್ನು ಎಸಗುತ್ತಿದ್ದ.
Advertisement
ಮಂಗಳೂರು ಯುವತಿಗೆ ಏನು ಮಾಡಿದ್ದ?
ಮಂಗಳೂರು ಮೂಲದ ಯುವತಿಯೊಬ್ಬರು ಬಿಕಾಂ ಮುಗಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮೇ 15 ರಂದು ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಖಾಸಗಿ ಬ್ಯಾಂಕ್‍ವೊಂದರಲ್ಲಿ ಸಂದರ್ಶನವನ್ನು ಅಟೆಂಡ್ ಮಾಡಿದ್ದರು. ನಾಲ್ಕು ಸುತ್ತಿನ ಸಂದರ್ಶನದಲ್ಲಿ ಪಾಸ್ ಆಗಿದ್ದ ಯುವತಿ ಐದನೇ ಸುತ್ತು ಮುಗಿದ ಬಳಿಕ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.
Advertisement
ಈ ವೇಳೆ ಯುವತಿಗೆ ಅಪರಿಚಿತ ನಂಬರ್‍ನಿಂದ ಕರೆ ಬಂದಿತ್ತು. ನಾನು ಬ್ಯಾಂಕ್‍ನ ಹೆಚ್‍ಆರ್, ನನ್ನ ಹೆಸರು ರೋಹನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಎಂದು ಹೇಳಿ ಯುವತಿಯನ್ನು ಬ್ಯಾಂಕಿನಿಂದ ಹೊರಬರುವಂತೆ ಹೇಳಿದ್ದ. ಯುವತಿ ಹೊರಹೋದ ನಂತರ ಆ ವ್ಯಕ್ತಿ, ಅಂತಿಮ ಸುತ್ತಿನ
ಸಂದರ್ಶನದಲ್ಲಿ ಫೇಲ್ ಆಗಿರುವುದಾಗಿ ಯುವತಿಗೆ ತಿಳಿಸಿದ್ದ.
ಫೇಲ್ ಆಗಿದ್ದರೂ ನೀವು ಕೆಲಸಕ್ಕೆ ಸೇರಬಹುದು ಎಂದು ಯುವತಿಗೆ ಅಮಿಷವೊಡ್ಡಿದ್ದ. ಈ ಬಗ್ಗೆ ಚರ್ಚೆ ಮಾಡುವುದಿದೆ ಮನೆಗೆ ಬನ್ನಿ ಎಂದು ಕರೆದಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಇಲ್ಲಿ ತುಂಬಾ ಟ್ರಾಫಿಕ್ ಇದೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಕಾರು ಹತ್ತಿ ಎಂದು ಕರೆದಿದ್ದ. ಆದ್ರೆ ಕಾರು ಹತ್ತಲು ಯುವತಿ ನಿರಾಕರಿಸಿದ್ದು, ಈ ವೇಳೆ ಆತ ನಡುರಸ್ತೆಯಲ್ಲೇ ಯವತಿಯನ್ನ ಎಳೆದು ಕಾರಿನಲ್ಲಿ ಕೂರಿಸಲು ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡು ಯುವತಿ ಕಚೇರಿಯೊಳಗೆ ತೆರಳಿದ್ರು. ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕೆಲಸದಲ್ಲಿ ಇಲ್ಲ ಎಂಬುದು ಪತ್ತೆಯಾಗಿತ್ತು. ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.