ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

Public TV
1 Min Read
Silvio Berlusconi

ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (86) (Silvio Berlusconi) ನಿಧನರಾಗಿದ್ದಾರೆ.

ಸಿಲ್ವಿಯೊ ಬೆರ್ಲುಸ್ಕೋನಿ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2016 ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2020ರಲ್ಲಿ ಕೊರೊನಾ ವೈರಸ್‍ (Corona Virus) ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. 6 ವಾರಗಳ ಹಿಂದೊಮ್ಮೆ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು. ಅದಾದ ಬಳಿಕ ಕಳೆದ ಶುಕ್ರವಾರ ಮಾಜಿ ಪ್ರಧಾನಿಯನ್ನು ಮಿಲನ್ ಆಸ್ಪತ್ರೆ (Milan Hospital) ಗೆ ದಾಖಲಿಸಲಾಗಿತ್ತು. ಈ ವೇಳೆ ಅಪರೂಪದ ರಕ್ತದ ಕ್ಯಾನ್ಸರ್ (Blood Cancer) ಇದೆ ಎಂದು ವೈದ್ಯರು ಬಹಿರಂಗಪಡಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1994 ಮತ್ತು 2011 ರ ನಡುವೆ ಒಟ್ಟು 9 ವರ್ಷಗಳ ಕಾಲ ಮೂರು ಬಾರಿ ಇಟಲಿಯ ಪ್ರಧಾನ ಮಂತ್ರಿಯಾದರು. ಆದರೆ ಲೈಂಗಿಕ ಹಗರಣಗಳು ಮತ್ತು ಭ್ರಷ್ಟಾಚಾರ ಆರೋಪಗಳಿಂದಾಗಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದಿದ್ದರು. ಸದ್ಯ ಅವರು ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ, ಇಬ್ಬರು ಮಾಜಿ ಪತ್ನಿಯರು ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ.

ಸಿಲ್ವಿಯೊ ಬೆರ್ಲುಸ್ಕೋನಿ ಅವರ ಸಾವು ದೊಡ್ಡ ನಷ್ಟವನ್ನು ಉಂಟುಮಾಡಿದೆ. ಅವರು ಒಬ್ಬ ಮಹಾನ್ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಇಟಾಲಿಯನ್ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಟ್ವಿಟರ್‍ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌

 

Share This Article