ನವದೆಹಲಿ: ಸ್ಥಳೀಯ ಬಿಜೆಪಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜು ಕುಮಾರ್ ಅಲಿಯಾಸ್ ರಾಜು ಪೆಹಲ್ವಾನ್ (33) ಬಂಧಿತ ಆಟಗಾರ. ಆರೋಪಿ ರಾಜುನನ್ನು ಬುಧವಾರ ಪೊಲೀಸರು ದೆಹಲಿಯ ಹೊರವಲದ ಸಿರಾಸ್ಪುರ್‍ದಲ್ಲಿ ಬಂಧಿಸಿದ್ದಾರೆ.
Advertisement
ಘಾಜಿಯಬಾದ್ ಖೋಡಾ ಕಾಲೋನಿ ಬಳಿ ಸೆಪ್ಟಂಬರ್ 2 ರಂದು ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಬಿಜೆಪಿ ನಾಯಕ ಗಂಜೇಂದ್ರ ಭಾಟಿ ಅವರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಭಾಟಿ ಅವರ ಸಹಾಯಕ ಬಲ್ಬೀರ್ ಸಿಂಗ್ ಚೌಹಾಣ್ ಗಾಯಗೊಂಡಿದ್ದರು.
Advertisement
ಉತ್ತರ ಪ್ರದೇಶ ಪೊಲೀಸರು ಸೆಪ್ಟಂಬರ್ 11 ರಂದು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ನರೇಂದರ್ ಅಲಿಯಾಸ್ ಫೌಜಿಯನ್ನು ಅರೆಸ್ಟ್ ಮಾಡಿದ್ದರು. ಆತನ ವಿಚಾರಣೆ ವೇಳೆ ಈ ಕೃತ್ಯದಲ್ಲಿ ರಾಜು ಪೆಹಲ್ವಾನ್ ಕೂಡ ಭಾಗಿಯಾಗಿದ್ದಾನೆ ಎಂದು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
Advertisement
ರಾಜು ಪೆಹಲ್ವಾನ್ ಸಿರಾಸ್ಪುರ್‍ದಲ್ಲಿ ಇರುವ ಮಾಹಿತಿ ತಿಳಿದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಒಂದು ತಂಡವನ್ನು ರಚನೆ ಮಾಡಿಕೊಂಡರು. ಆರೋಪಿ ರಾಜು ಬೇರೆ ಸ್ಥಳಕ್ಕೆ ನಾಪತ್ತೆಯಾಗಲು ಜಿಟಿ ಕಾರ್ನಾಲ್ ರಸ್ತೆ ಸಮೀಪದ ಸಿರಾಸ್ಪುರ್‍ದ ಗುರುದ್ವಾರದ ಬಸ್ ನಿಲ್ದಾಣದಲ್ಲಿ ನಿಂತಿದ್ದನು. ಪೊಲೀಸರು ಹಿಡಿಯಲು ಮುಂದಾಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಕೊನೆಗೆ ಪೊಲೀಸರು ರಾಜುವನ್ನು ಸೆರೆ ಹಿಡಿದಿದ್ದಾರೆ.
Advertisement
ಕೊಲೆ ಕೃತ್ಯ ಎಸಗಲು ಇಬರಿಬ್ಬರು ಮುಂಗಡವಾಗಿ 10 ಲಕ್ಷ ಮತ್ತು 50 ಸಾವಿರ ರೂ. ಹಣವನ್ನು ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.
2013 ರಲ್ಲಿ ನಮ್ಮ ವಾಹನಗಳು ಗ್ರೇಟರ್ ನೋಯ್ಡಾದ ಬಳಿ ಡಿಕ್ಕಿ ಹೊಡೆದ ಬಳಿಕ ಭಾಟಿ ನಮ್ಮ ಮೇಲೆ ದಾಳಿ ನಡೆಸಿದ್ದರು. ನಂತರ 2015 ರಲ್ಲಿ ಭಾಟಿ ಬಲವಂತವಾಗಿ ರಾಜಿ ಮಾಡಿಸಿದ್ದರು. ಆದರೆ ಅವರು ಬೆದರಿಕೆ ಹಾಕಿ ಕ್ರೀಡಾ ಆವರಣದಲ್ಲಿ ಗುಂಡು ಹಾರಿಸಿದ್ದರು. ನಾನು ಪೊಲೀಸರಿಗೆ ದೂರು ನೀಡಲು ಹೋದಾಗ ಆ ಪ್ರದೇಶದಲ್ಲಿ ಅವರು ಪ್ರಭಾವಿ ವ್ಯಕ್ತಿಯಾದ್ದರಿಂದ ಯಾರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ವಿಚಾರಣೆಯ ವೇಳೆಯಲ್ಲಿ ಬಂಧಿತ ರಾಜು ಹೇಳಿದ್ದಾನೆ.
ಕೊನೆಗೆ ರಾಜು ಭಾಟಿ ಅವರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಫೌಜಿಯ ಜೊತೆ ಸಂಪರ್ಕದಲ್ಲಿದ್ದು, ಲೋನಿ ನಗರದ ಭೂಪ್ಖೇರಿ ಗ್ರಾಮದ ಮುಖೇಶ್ ಹಾಗೂ ರಾಜಕೀಯ ವೈರತ್ವ ಹೊಂದಿದ್ದ ಶರ್ಮಾ ಅವರು ಇವರ ಜೊತೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ನಗರದ ಇಬ್ಬರು ಉದ್ಯಮಿಗಳಾದ ಸೂರಜ್ ಮತ್ತು ಪರ್ಮೋಡಾ ಅವರ ಹತ್ತಿರ ಭಾಟಿಯನ್ನು ಕೊಲ್ಲಲು 8 ಲಕ್ಷ ರೂ. ಹಣವನ್ನು ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜು ಪೆಹಲ್ವಾನ್ ವಿವಿಧ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಆಟವಾಡಿದ್ದಾನೆ. 2005 ಮತ್ತು 2009 ರಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಪ್ರತಿನಿಧಿಸಿದ್ದ ಜೊತೆಗೆ ಭಾರತದ ಕಬಡ್ಡಿ ತಂಡದಲ್ಲೂ ಸ್ಥಾನವನ್ನು ಪಡೆದಿದ್ದ.