– 1962ರಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ಗೋಸ್ವಾಮಿ
– ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು
ಕೋಲ್ಕತಾ: ಭಾರತ ತಂಡದ ಫುಟ್ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ(82)ಯವರು ನಿಧನರಾಗಿದ್ದಾರೆ.
ಧೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚುನಿ ಗೋಸ್ವಾಮಿಯವರು ಗುರುವಾರ ಕೋಲ್ಕತಾದಲ್ಲಿ ನಿಧನರಾಗಿದ್ದಾರೆ. ಚುನಿ ಅವರು ಸಕ್ಕರೆ ಖಾಯಿಲೆ ಒಳಗೊಂಡಂತೆ ಪ್ರಾಸ್ಟೇಟ್, ನರಗಳ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬುಧವಾರ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ಡಿಯಾಕ್ ಅರೆಸ್ಟ್‍ನಿಂದಾಗಿ ಗುರುವಾರ ಸಂಜೆ 5 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.
Advertisement
Former Indian footballer Chuni Goswami passes away due to cardiac arrest in Kolkata, West Bengal.
— ANI (@ANI) April 30, 2020
Advertisement
ಗೋಸ್ವಾಮಿಯವರು 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದ ತಂಡದ ಕ್ಯಾಪ್ಟನ್ ಆಗಿದ್ದರು. ಅಲ್ಲದೆ ಗೋಸ್ವಾಮಿಯವರು ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದರು. ಇವರ ನಾಯಕತ್ವದಲ್ಲಿ ಭಾರತದ ಫುಟ್‍ಬಾಲ್ ತಂಡ 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದಿತ್ತು. ಅಲ್ಲದೆ ರನ್ನರ್ ಅಪ್ ಹಂತ ತಲುಪುವ ಮೂಲಕ 1964ರಲ್ಲಿ ಏಷಿಯನ್ ಕಪ್ ಪೂರ್ಣಗೊಳಿಸಿತ್ತು. ಇದಾದ ಆರು ತಿಂಗಳ ನಂತರ ನಡೆದಿದ್ದ ಮರ್ಡೆಕಾ ಫುಟ್‍ಬಾಲ್ ನಲ್ಲಿ ಬರ್ಮಾ ವಿರುದ್ಧ ಭಾರತ ಸೋಲನುಭವಿಸಿತ್ತು.
Advertisement
ಕ್ಲಬ್ ಫುಟ್‍ಬಾಲ್‍ನಲ್ಲಿ ಗೋಸ್ವಾಮಿಯವರು ಯಾವಾಗಲೂ ಮೋಹನ್ ಬಗಾನ್ ಪರ ಆಡುತ್ತಿದ್ದರು. ಅವರ ಕಾಲೇಜು ದಿನಗಳಲ್ಲಿ ಒಂದೇ ವರ್ಷದಲ್ಲಿ ಕೋಲ್ಕತಾ ವಿಶ್ವವಿದ್ಯಾಲಯದ ಫುಟ್‍ಬಾಲ್ ಹಾಗೂ ಕ್ರಿಕೆಟ್ ತಂಡ ಎರಡರ ಕ್ಯಾಪ್ಟನ್ ಆಗಿದ್ದರು.
Advertisement
ಗೋಸ್ವಾಮಿಯವರು 1957ರಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಲು ಪ್ರಾರಂಭಿಸಿದ್ದರು. ಅವರು 1964ರಲ್ಲಿ 27 ವರ್ಷದವರಾಗಿದ್ದಾಗ ಅಂತರಾಷ್ಟ್ರೀಯ ಫುಟ್‍ಬಾಲ್ ಪಂದ್ಯ ಆಡುವುದನ್ನು ನಿಲ್ಲಿಸಿದ ನಂತರ ರಾಷ್ಟ್ರೀಯ ತಂಡದ ದೊಡ್ಡ ಸ್ಟಾರ್ ಆಗಿದ್ದರು. ಗೋಸ್ವಾಮಿಯವರು ಫುಟ್‍ಬಾಲ್ ಮಾತ್ರವಲ್ಲ ಕ್ರಿಕೆಟ್‍ನಲ್ಲಿಯೂ ಯಶಸ್ವಿ ಆಟಗಾರರಾಗಿದ್ದರು.