ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪಂಜಾಬ್‍ನ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಅವರನ್ನು ಬೆಂಬಲಿಸಿ ಭಾರತೀಯ ತಂಡದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹರ್ಜಿತ್ ಸಿಂಗ್ ಅವರ ಶೌರ್ಯ ಮತ್ತು ಉತ್ಸಾಹಕ್ಕೆ ಧನ್ಯವಾದ ತಿಳಿಸಲು ಪಂಜಾಬ್ ಪೊಲೀಸರು ಸೋಮವಾರ ‘ಮೇನ್ ಭೀ ಹರ್ಜಿತ್ ಸಿಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಹರ್ಜಿತ್ ಸಿಂಗ್ ಹೆಸರಿರುವ ಬ್ಯಾಡ್ಜ್ ಅನ್ನು ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡಿದ್ದರು.
Advertisement
Advertisement
ಇದೇ ಅಭಿಯಾನದಲ್ಲಿ ಅಡಿ 2011ರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ತಂಡದ ಆಲ್‍ರೌಂಡರ್ ಯುವಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಪಂಜಾಬ್ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ತಮ್ಮ ಜೀವನವನ್ನು ಲೆಕ್ಕಿಸದೇ ನಮ್ಮನ್ನು ರಕ್ಷಿಸುತ್ತಿದ್ದಾರೆ. ಪಂಜಾಬ್‍ನ ಪ್ರತಿಯೊಬ್ಬರು ಹರ್ಜಿತ್ ಸಿಂಗ್ ಅವರೊಂದಿಗಿದೆ. ನಾನು ಕೂಡ ಅವರೊಂದಿಗೆ ಇದ್ದೇನೆ” ಎಂದು ಯುವರಾಜ್ ಹೇಲಿದ್ದಾರೆ.
Advertisement
“ಹರ್ಜಿತ್ ಸಿಂಗ್ ಅವರ ಧೈರ್ಯ ಮತ್ತು ಪರಿಶ್ರಮ ದೇಶಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದೆ. ಎಲ್ಲಾ ಪೊಲೀಸ್ ಪಡೆಗಳಿಗೆ ತುಂಬು ಹೃದಯದ ಧನ್ಯವಾದಗಳು. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಯುವಿ ತಿಳಿಸಿದ್ದಾರೆ.
Advertisement
The courage and determination of Harjeet Singh has inspired all across the country. A big thank you to the police force for all your selfless efforts. We are together with you. #MainBhiHarjeetSingh#HoshiarpurPolice#PunjabPoliceIndia@PunjabPoliceInd @DGPPunjabPolice pic.twitter.com/SuxkVGo6d3
— Yuvraj Singh (@YUVSTRONG12) April 28, 2020
ಏನಿದು ಪ್ರಕರಣ?
ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಏಪ್ರಿಲ್ 12ರಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.
DG AP & AP Police stand in solidarity with SI Harjeet Singh of Punjab Police whose hand was severed by criminals while he was enforcing lockdown. We stand united against attack on sanitary workers,doctors,nurses,police & others fighting Covid on the frontline #MainBhiHarjeetSingh pic.twitter.com/kaunqigOsw
— Andhra Pradesh Police (@APPOLICE100) April 27, 2020
ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.
SI Harjeet Singh is a symbol of bravery,
Today all @PunjabPoliceInd wear his name with pride.#MainBhiHarjeetSingh#Covid_19 @MahilaCongress @sushmitadevinc @capt_amarinder @sunilkjakhar @AshaKumariINC @mamta_bhupesh @mamta_duttainc pic.twitter.com/2LTbyZb0L7
— Punjab Pradesh Mahila Congress (@PunjabPMC) April 27, 2020
ಇತ್ತೀಚಿಗೆ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿದ್ದ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ಕೊಂಡಿದ್ದರು.