ಮುಂಬೈ: ಟೀಂ ಇಂಡಿಯಾದ ಎಡಗೈ ವೇಗದ ಬೌಲರ್, 2007ರ ಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯ ರುದ್ರ ಪ್ರತಾಪ್ ಸಿಂಗ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಸಂಬಂಧ ಭಾವನಾತ್ಮಕ ಪತ್ರವನ್ನು ಬರೆದು ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ 32ರ ಹರೆಯದ ಆರ್‌ಪಿ ಸಿಂಗ್ ತಿಳಿಸಿದ್ದಾರೆ. ವಿಶೇಷ ಏನೆಂದರೆ 13 ವರ್ಷದ ಬಳಿಕ 2005ರ ಸೆಪ್ಟೆಂಬರ್ 4 ರಂದು ಆರ್‌ಪಿ ಸಿಂಗ್ ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿದ್ದರು.
Advertisement
ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ನನ್ನ ಕನಸಿನ ಜೀವನದಲ್ಲಿ ಜೀವಿಸಲಿದ್ದೇನೆ ಎಂದುಕೊಂಡಿರಲಿಲ್ಲ. ನನ್ನ ಕನಸನ್ನು ನನಸಾಗಿಸಲು ನನ್ನ ಸಾಮಥ್ರ್ಯದಲ್ಲಿ ನಂಬಿಕೆ ಇಟ್ಟಿದ್ದಕ್ಕೆ, ವಿಮರ್ಷೆ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಎಂದು ತಿಳಿಸಿದ್ದಾರೆ
Advertisement
2005ರ ಸೆಪ್ಟೆಂಬರ್ 4 ರಂದು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಪಂದ್ಯವಾಡಿದ್ದ ಆರ್‌ಪಿ ಸಿಂಗ್ 2011ರ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. 2006ರ ಜನವರಿಯಲ್ಲಿ ಪಾಕ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಸಿಂಗ್ ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು.
Advertisement
14 ಟೆಸ್ಟ್ ಪಂದ್ಯಗಳ 25 ಇನ್ನಿಂಗ್ಸ್ ನಲ್ಲಿ 40 ವಿಕೆಟ್ ಪಡೆದಿರುವ ಆರ್‌ಪಿ ಸಿಂಗ್ 58 ಏಕದಿನ ಪಂದ್ಯಗಳ 57 ಇನ್ನಿಂಗ್ಸ್ ನಲ್ಲಿ 69 ವಿಕೆಟ್ ಪಡೆದಿದ್ದಾರೆ. 10 ಟಿ20 ಪಂದ್ಯವಾಡಿದ್ದು 15 ವಿಕೆಟ್ ಸಂಪಾದಿಸಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20ಯ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಪಿ ಸಿಂಗ್ 4 ಓವರ್ ಎಸೆದು ಮೂರು ವಿಕೆಟ್ ಕಿತ್ತಿದ್ದರು. ಮೊದಲ ಓವರ್ ನಲ್ಲೇ ಹಫೀಸ್ ವಿಕೆಟ್ ಪಡೆದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
???? pic.twitter.com/VluMI8unxM
— R P Singh रुद्र प्रताप सिंह (@rpsingh) September 4, 2018