ನವದೆಹಲಿ: ಕ್ರಿಕೆಟ್‍ನಿಂದ ಸ್ವಲ್ಪ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಝೀವಾ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಅಪ್ಪನಿಗೆ ಹೊಸ ಜೀಪ್ ತೊಳೆಯಲು ಸಹಾಯ ಮಾಡಿದ್ದ ಝೀವಾ, ಈ ಬಾರಿ ತಂದೆಗೆ ಮಸಾಜ್ ಮಾಡಿದ್ದಾಳೆ. ಝೀವಾಳ ಇನ್‍ಸ್ಟಾಗ್ರಾಮ್‍ನಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಒಂದರಲ್ಲಿ ಝೀವಾ ಅಪ್ಪನ ಭುಜವನ್ನು ಒತ್ತಿ ಮಸಾಜ್ ಮಾಡುತ್ತಿದ್ದರೆ, ಧೋನಿ ಕಣ್ಣು ಮುಚ್ಚಿ ಮಗಳ ಕಾಳಜಿಯನ್ನು ಸ್ವೀಕರಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಝೀವಾ ಅಪ್ಪನನ್ನು ತಬ್ಬಿಕೊಂಡು ಮುದ್ದಾಡಿದ್ದಾಳೆ.
Advertisement
https://www.instagram.com/p/B4AC2SDnEAF/
Advertisement
ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಪ್ಪನ ಮೇಲೆ ವಿಶೇಷ ಕಾಳಜಿ ತೋರಿದ ಝೀವಾಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಎಂ.ಎಸ್.ಧೋನಿ ಮನೆಗೆ ಹೊಸ ಅತಿಥಿಯಾಗಿ ಭಾರತೀಯ ಸೇನೆಯಲ್ಲಿ ಬಳಸುವ ನಿಸ್ಸಾನ್ ಕಂಪನಿಯ ಜೊಂಗಾ ಜೀಪ್ ಬಂದಿದೆ. ಹೊಸ ಜೀಪ್‍ನಲ್ಲಿ ಜಾಲಿ ರೈಡ್ ಹೋಗಿದ್ದ ಧೋನಿ, ಅದನ್ನು ತೊಳೆಯುತ್ತಿರುವ ವಿಡಿಯೋ ಒಂದನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವೇಳೆ ಅಪ್ಪನಿಗೆ ಪುತ್ರಿ ಝೀವಾ ಕೂಡ ಸಹಾಯ ಮಾಡಿದ್ದರು.
Advertisement
https://www.instagram.com/p/B3_xwpuF9A9/?utm_source=ig_embed
ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ ಧೋನಿ, ಚಿಕ್ಕ ಸಹಾಯವು ನಿಮ್ಮನ್ನ ಹೆಚ್ಚು ದೂರದವೆರಗು ಕರೆದುಕೊಂಡು ಹೋಗುತ್ತದೆ. ಇಂತಹ ದೊಡ್ಡ ಜೀಪ್ ಎಂದು ಭಾವಿಸಿದಾಗಲೂ ಎಂದು ಬರೆದುಕೊಂಡಿದ್ದರು.
ಅಪ್ಪನಿಗೆ ಸಹಾಯ ಮಾಡಿದ ಝೀವಾಳ ಬಗ್ಗೆ ಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಆಗ ಕೇವಲ ಒಂದು ಗಂಟೆಯಲ್ಲಿ 9 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 7 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದರು.
ಏಕದಿನ ವಿಶ್ವಪಕ್ ಟೂರ್ನಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿ ಗುಡ್ ನ್ಯೂಸ್ ಸಿಕ್ಕಿದೆ.
ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಎಂ.ಎಸ್.ಧೋನಿ ಅವರನ್ನು ಮರಳಿ ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ಸೌರವ್ ಗಂಗೂಲಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಆಯ್ಕೆ ಸಮಿತಿ ಹಾಗೂ ಟೀಂ ಮ್ಯಾನೇಜ್‍ಮೆಂಟ್ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್‍ಗೆ ಧೋನಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
2020ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಐಸಿಸಿ ಟಿ-20 ವಿಶ್ವಕಪ್‍ನಲ್ಲಿ ಎಂ.ಎಸ್.ಧೋನಿ ಭಾಗವಹಿಸಲಿದ್ದಾರೆ. ಇದು ಧೋನಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ತಂದಿದೆ.