ಬೆಂಗಳೂರು: ಕಳಪೆ ಕಾಮಗಾರಿ ವಿರುದ್ಧ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಅಸಮಾಧಾನ ಹೊರಹಾಕಿದ್ದು, ಈ ಕುರಿತು ತನಿಖೆ ನಡೆಸುವಂತೆ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ನಗರೋತ್ಥಾನ ವಿಶೇಷ ಯೋಜನೆ ಅಡಿ ಕೈಗೆತ್ತಿಕೊಂಡಿರುವ 279 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಗುತ್ತಿಗೆದಾರರು ಹಲವು ಪ್ರದೇಶಗಳಲ್ಲಿ ನಡೆಸಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಬಿಟಿಎಂ ಲೇಔಟ್ ನ ರಾಜೇಂದ್ರ ನಗರ, ಸಿಲ್ಕ್ ಬೋರ್ಡ್ ಆಫೀಸ್, ಮಡಿವಾಳ ಕೆರೆ, ತಾವರೆಕೆರೆ ಮುಖ್ಯರಸ್ತೆಯ ಕಾಮಗಾರಿಗಳು ನಡೆಯುತ್ತಿದೆ. ಇದರಲ್ಲಿ ರಾಜೇಂದ್ರನಗರದ ಕಾಮಗಾರಿ ಅಲ್ಪ ಪ್ರಮಾಣದಲ್ಲಿ ಮಾತ್ರ ನಿರ್ವಹಿಸಿದ್ದು ಇದರಲ್ಲೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಪತ್ರದ ಮೂಲಕ ಆರೋಪಿಸಿದ್ದಾರೆ.
Advertisement
ಸಿಲ್ಕ್ ಬೋರ್ಡ್ ಆಫೀಸ್, ಮಡಿವಾಳ ಕೆರೆ, ತಾವರಕೆರೆ ಮುಖ್ಯರಸ್ತೆಯ ಕಾಮಗಾರಿಗಳು ಕಳೆದ ಒಂದು ವರ್ಷದಿಂದ ಕೈಗೊಳ್ಳದೆ ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡಿದ್ದಾರೆ. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ಅವಶ್ಯಕವಾಗಿದೆ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಪ್ಯಾಕೇಜ್-4 ರ ಅಡಿಯಲ್ಲಿ ಗುತ್ತಿಗೆದಾರರು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಸಮಗ್ರ ತನಿಖೆ ನಡೆಸಿ ಅಂತ ಮನವಿ ಮಾಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv